ಮುಸ್ಲಿಮರನ್ನು ಒಪ್ಪದಿದ್ದರೆ ಅದು ಹಿಂದುತ್ವವಲ್ಲ: ಆರೆಸ್ಸೆಸ್ ನಾಯಕ ಮೋಹನ್ ಭಾಗವತ್

Update: 2018-09-18 15:51 GMT

ಹೊಸದಿಲ್ಲಿ, ಸೆ.18: ಹಿಂದುತ್ವ ಎಂದರೆ ಅಂತರ್ಗತತೆ. ಮುಸ್ಲಿಮರನ್ನು ಸ್ವೀಕರಿಸುವುದು ಇದರ ಭಾಗವಾಗಿದೆ. ಹಿಂದೂ ರಾಷ್ಟ್ರವೆಂದರೆ ಅಲ್ಲಿ ಮುಸ್ಲಿಮರಿಗೆ ಜಾಗವಿಲ್ಲ ಎಂದರ್ಥವಲ್ಲ. ನಾವು ಮುಸ್ಲಿಮರನ್ನು ಒಪ್ಪದಿದ್ದರೆ ಅದು ಹಿಂದುತ್ವವಾಗುವುದಿಲ್ಲ ಎಂದು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಹೇಳಿದರು.

ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ಸನ್ನು ಮುಸ್ಲಿಮ್ ಬ್ರದರ್ ಹುಡ್ ಗೆ ಹೋಲಿಸಿದ ರಾಹುಲ್ ಗಾಂಧಿಯನ್ನು ಟೀಕಿಸಿದರು. “ಸಂಘವು ಜಾಗತಿಕ ಸಹೋದರತ್ವ (ಬ್ರದರ್ ಹುಡ್)ದ ಬಗ್ಗೆ ಮಾತನಾಡುತ್ತದೆ. ಈ ಸಹೋದರತ್ವವು ಒಗ್ಗಟ್ಟು ಮತ್ತು ವಿವಿಧತೆಯಿಂದ ಕೂಡಿದೆ. ಇದು ಹಿಂದುತ್ವದ ಸಂಪ್ರದಾಯವಾಗಿದೆ” ಎಂದವರು ಹೇಳಿದರು.

ಇಡೀ ಸಮಾಜವನ್ನು ಒಗ್ಗೂಡಿಸುವುದು ಸಂಘದ ಉದ್ದೇಶವಾಗಿದೆ. “ಆರಂಭದಿಂದಲೂ ಆರೆಸ್ಸೆಸ್ ರಾಜಕೀಯದಿಂದ ದೂರವಿತ್ತು. ಅದು ಯಾವತ್ತಿಗೂ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಆರೆಸ್ಸೆಸ್ ಕಾರ್ಯಕರ್ತರು ಪಕ್ಷವೊಂದರ ಕಚೇರಿ ಅಧಿಕಾರಿಗಳಾಗಿರಬಾರದು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News