ಸುಳ್ಳುಗಳನ್ನು ಹರಡುತ್ತಿರುವ ರಾಹುಲ್ ಗಾಂಧಿ: ಜೇಟ್ಲಿ ಆರೋಪ

Update: 2018-09-20 14:23 GMT

ಹೊಸದಿಲ್ಲಿ,ಸೆ.20: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ರಫೇಲ್ ಒಪ್ಪಂದಕ್ಕೆ ಮತ್ತು 15 ಕೈಗಾರಿಕಾ ಸಂಸ್ಥೆಗಳಿಗೆ ನೀಡಲಾಗಿರುವ ಸಾಲಗಳ ಮನ್ನಾಕ್ಕೆ ಸಂಬಂಧಿಸಿದಂತೆ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಆರೋಪಿಸಿದ್ದಾರೆ.

ಪಕ್ವ ಪ್ರಜಾಪ್ರಭುತ್ವಗಳಲ್ಲಿ ಸುಳ್ಳುಗಳನ್ನೇ ನಂಬಿಕೊಂಡವರನ್ನು ಸಾರ್ವಜನಿಕ ಜೀವನಕ್ಕೆ ಅನರ್ಹರೆಂದು ಪರಿಗಣಿಸಲಾಗುತ್ತದೆ ಎಂದು ಜೇಟ್ಲಿ ‘ಯುವರಾಜನೋರ್ವನ ಸುಳ್ಳುಗಾರಿಕೆ ’ಶೀರ್ಷಿಕೆಯ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕುಟುಕಿದ್ದಾರೆ.

  ನೀವು ರಫೇಲ್ ಒಪ್ಪಂದದ ಕುರಿತು,ಕೆಟ್ಟಸಾಲಗಳ ಕುರಿತು ಸುಳ್ಳುಗಳನ್ನು ಹೇಳುತ್ತಿದ್ದೀರಿ. ಕಪೋಲಕಲ್ಪಿತ ವಿಷಯಗಳನ್ನು ಸೃಷ್ಟಿಸುವ ನಿಮ್ಮ ಪ್ರವೃತ್ತಿಯು ಸುಳ್ಳೇ ನೈಸರ್ಗಿಕ ಆದ್ಯತೆಯಾಗಿರುವ ವ್ಯಕ್ತಿ ಸಾರ್ವಜನಿಕ ಜೀವನಕ್ಕೆ ಅರ್ಹನಾಗುತ್ತಾನೆಯೇ ಎಂಬ ಯಥೋಚಿತ ಪ್ರಶ್ನೆಯನ್ನೆತ್ತಿದೆ. ಸಾರ್ವಜನಿಕ ಜೀವನವು ಗಂಭೀರ ಚಟುವಟಿಕೆಯಾಗಿದೆ,ಅದು ತಮಾಷೆಯ ಮಾತಲ್ಲ. ಅಪ್ಪುಗೆ,ಕಣ್ಣು ಮಿಟುಕಿಸುವಿಕೆ ಅಥವಾ ಸುಳ್ಳಿನ ಪುನರಾವರ್ತನೆಯ ಮಟ್ಟಕ್ಕೆ ಅದನ್ನು ತಗ್ಗಿಸುವಂತಿಲ್ಲ. ‘ಯುವರಾಜ’ನೋರ್ವನ ಸುಳ್ಳುಗಳಿಂದಾಗಿ ಸಾರ್ವಜನಿಕ ಜೀವನ ಕಲುಷಿತಗೊಳ್ಳುಲು ಅವಕಾಶ ನೀಡಬೇಕೇ ಎಂಬ ಬಗ್ಗೆ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವು ಆತ್ಮಪರೀಕ್ಷೆ ಮಾಡಿಕೊಳ್ಳಬೇಕಿದೆ ಎಂದು ಜೇಟ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News