ಕೇಂದ್ರದ ವಿವಿಧ ಇಲಾಖೆಗಳಲ್ಲಿರುವ 1,136 ಖಾಲಿಹುದ್ದೆಗಳ ನೇಮಕಕ್ಕೆ ಕ್ರಮ

Update: 2018-09-20 14:43 GMT

ಹೊಸದಿಲ್ಲಿ,ಸೆ.20: ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 1,136 ಹುದ್ದೆಗಳಿಗೆ ಸಿಬ್ಬಂದಿ ಆಯ್ಕೆ ಆಯೋಗ(ಎಸ್‌ಎಸ್‌ಸಿ)ವು ನೇಮಕಗಳನ್ನು ಮಾಡಲಿದೆ ಎಂದು ಸಿಬ್ಬಂದಿ ಸಚಿವಾಲಯವು ಗುರುವಾರ ಹೊರಡಿಸಿರುವ ಅಧಿಕೃತ ಹೇಳಿಕೆಯು ತಿಳಿಸಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಕೊರತೆಗಾಗಿ ಕಾಂಗ್ರೆಸ್ ಪಕ್ಷವು ಸರಕಾರವನ್ನು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕಟಣೆ ಮಹತ್ವ ಪಡೆದುಕೊಂಡಿದೆ.

 ವಿವಿಧ ಇಲಾಖೆಗಳು/ಸಂಸ್ಥೆಗಳಲ್ಲಿಯ 130 ವರ್ಗಗಳ ಒಟ್ಟು 1,136 ಗ್ರೂಪ್ ಬಿ ಹುದ್ದೆಗಳಿಗೆ ಭರ್ತಿಗಾಗಿ ಎಸ್‌ಎಸ್‌ಸಿಯು ಜಾಹೀರಾತನ್ನು ಹೊರಡಿಸಿದೆ. ಜಾಹೀರಾತುಗಳನ್ನು ಎಸ್‌ಎಸ್‌ಸಿಯ ಮತ್ತು ಅದರ ಪ್ರಾದೇಶಿಕ ಕಚೇರಿಗಳ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಹಲವಾರು ಪ್ರಾದೇಶಿಕ ಕಚೇರಿಗಳಡಿ ಹಲವಾರು ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಕೇವಲ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಅರ್ಜಿಗಳನ್ನು ಸಲ್ಲಿಸಲು ಸೆ.30 ಕೊನೆಯ ದಿನಾಂಕವಾಗಿದೆ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News