ಮೋದಿ, ಸಿಎಂ ಚಿತ್ರಗಳಿರುವ ಟೈಲ್ಸ್‌ಗಳನ್ನು ತೆಗೆದು ಹಾಕಿ: ಹೈಕೋರ್ಟ್ ಸೂಚನೆ

Update: 2018-09-20 14:53 GMT

ಗ್ವಾಲಿಯರ್, ಸೆ. 20: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಬಡವರಿಗಾಗಿ ನಿರ್ಮಿಸಲಾದ ಮನೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರ ಭಾವಚಿತ್ರ ಹೊಂದಿರುವ ಟೈಲ್ಸ್‌ಗಳನ್ನು ತೆಗೆಯುವಂತೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಗುರುವಾರ ಮಧ್ಯಪ್ರದೇಶ ಸರಕಾರಕ್ಕೆ ನಿರ್ದೇಶಿಸಿದೆ.

ಮಧ್ಯಪ್ರದೇಶದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆ ಮೇಲೆ ರಾಜ್ಯ ಸರಕಾರ ಕಣ್ಣಿರಿಸಿದೆ. ಈ ಹಿನ್ನೆಲೆಯಲ್ಲಿ ಭಾವಚಿತ್ರ ಹೊಂದಿರುವ ಟೈಲ್ಸ್ ತೆಗೆಯುವಂತೆ ಹಾಗೂ ಡಿಸೆಂಬರ್ 20ರ ಒಳಗೆ ಅನುಸರಣಾ ವರದಿ ಸಲ್ಲಿಸುವಂತೆ ಉಚ್ಚ ನ್ಯಾಯಾಲಯ ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ನರೇಂದ್ರ ಮೋದಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಅವರ ಭಾವಚಿತ್ರ ಹಾಗೂ ‘ನಮ್ಮ ಕನಸು, ನಮ್ಮ ಮನೆ’ ಎಂಬ ಸಂದೇಶ ಕೆತ್ತಲಾಗಿರುವ ವಿಶೇಷ ಸೆರಾಮಿಕ್ ಟೈಲ್ಸ್‌ಗಳನ್ನು ಸರಕಾರದ ಕಲ್ಯಾಣ ಯೋಜನೆ (ಪಿಎಂಎವೈ) ಅಡಿ ನಿರ್ಮಿಸಲಾದ ಮನೆಯ ಪ್ರವೇಶ ಹಾಗೂ ಅಡುಗೆ ಕೋಣೆಯಲ್ಲಿ ಅಳವಡಿಸಲಾಗಿದೆ. ಪತ್ರಕರ್ತ ಸಂಜಯ್ ಪುರೋಹಿತ್ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಟೈಲ್ಸ್ ತೆಗೆಯುವಂತೆ ನ್ಯಾಯಮೂರ್ತಿಗಳಾದ ಸಂಜಯ್ ಯಾದವ್ ಹಾಗೂ ವಿವೇಕ್ ಅಗ್ರವಾಲ್ ಅವರನ್ನು ವಿಭಾಗೀಯ ನ್ಯಾಯಪೀಠ ಸರಕಾರಕ್ಕೆ ನಿರ್ದೇಶಿಸಿದೆ.

ಪಿಎಂಎವೈ ಲೋಗೊ ಅನ್ನು ಮಾತ್ರ ಮನೆಗಳ ಟೈಲ್ಸ್ ಹೊಂದಿವೆ ಎಂದು ಕೇಂದ್ರ ಸರಕಾರ ನ್ಯಾಯಾಲಯಕ್ಕೆ ತಿಳಿಸಿತು. ತಾವು ಈ ಹಿಂದೆಯೇ ಆದೇಶ ಬದಲಾಯಿಸಿದ್ದೇವೆ ಹಾಗೂ ಟೈಲ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಅವರ ಭಾವಚಿತ್ರಗಳನ್ನು ಹೊಂದುವುದು ಕಡ್ಡಾಯವಲ್ಲ ಎಂದು ತಿಳಿಸಿದ್ದೆವು ಎಂದು ಮಧ್ಯಪ್ರದೇಶದ ವಕೀಲ ಪರಶುರಾಮ ಕೌರವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News