ಮ.ಪ್ರದೇಶದ ಮೂಲಸೌಕರ್ಯ ಯೋಜನೆಗಳಿಗೆ ಬ್ರಿಕ್ಸ್ ಬ್ಯಾಂಕಿನಿಂದ 525 ಮಿ.ಡಾ.ಸಾಲ ಮಜೂರು

Update: 2018-09-20 16:55 GMT

 ಬೀಜಿಂಗ್,ಸೆ.20: ಬ್ರಿಕ್ಸ್ ರಾಷ್ಟ್ರಗಳು ಸ್ಥಾಪಿಸಿರುವ ಶಾಂಘೈನ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್(ಎನ್‌ಡಿಬಿ) ಮೂಲಸೌಕರ್ಯ ಯೋಜನೆಗಳಿಗಾಗಿ ಮಧ್ಯಪ್ರದೇಶಕ್ಕೆ 525 ಮಿ.ಡಾ.ಸಾಲವನ್ನು ಮಂಜೂರು ಮಾಡಿದೆ.

 ಬುಧವಾರ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಮಧ್ಯಪ್ರದೇಶದಲ್ಲಿ ಪ್ರಮುಖ ಜಿಲ್ಲಾ ರಸ್ತೆಗಳ ಯೋಜನೆ-2ಕ್ಕಾಗಿ 350 ಮಿ.ಡಾ. ಮತ್ತು 350 ಸೇತುವೆಗಳ ನಿರ್ಮಾಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗಾಗಿ 175 ಮಿ.ಡಾ.ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಬ್ಯಾಂಕು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಸಾಲದ ಮೊತ್ತವು ಭಾರತ ಸರಕಾರದ ಮೂಲಕ ಮಧ್ಯಪ್ರದೇಶಕ್ಕೆ ಸಾಲನೀಡಿಕೆಗಾಗಿ ಬಳಕೆಯಾಗಲಿದೆ.

ಸದಸ್ಯ ರಾಷ್ಟ್ರಗಳಲ್ಲಿ ಹಸಿರು ಮತ್ತು ಮೂಲಸೌಕರ್ಯ ಯೋಜನೆಗಳಿಗೆ ನೆರವಾಗಲು ಬ್ರಾಝಿಲ್,ರಷ್ಯಾ,ಭಾರತ,ಚೀನಾ ಮತ್ತು ದ.ಆಫ್ರಿಕಾಗಳನ್ನೊಳಗೊಂಡ ಬ್ರಿಕ್ಸ್ ಎನ್‌ಡಿಬಿಯನ್ನು ಸ್ಥಾಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News