ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ: ಪಾದ್ರಿ ಸ್ಥಾನದಿಂದ ಪ್ರಾಂಕೊ ಮುಳಕ್ಕಲ್ ವಜಾ

Update: 2018-09-20 17:29 GMT

ಹೊಸದಿಲ್ಲಿ, ಸೆ. 20: ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಆರೋಪಕ್ಕೆ ಒಳಗಾದ ಬಿಷಪ್ ಫ್ರಾಂಕೊ ಮುಳಕ್ಕಲ್ ಅವರನ್ನು ವ್ಯಾಟಿಕನ್ ಪಾದ್ರಿ ಜವಾಬ್ದಾರಿಯಿಂದ ತಾತ್ಕಾಲಿಕವಾಗಿ ತೆಗೆದು ಹಾಕಿದೆ. ಜಲಂಧರ್‌ನ ಡಯಾಸಿಸ್‌ನಲ್ಲಿರುವ ಪಾದ್ರಿ ಜವಾಬ್ದಾರಿಯಿಂದ ತಾತ್ಕಾಲಿಕವಾಗಿ ಮುಕ್ತ ಮಾಡುವಂತೆ ಕೋರಿ ಬಿಷಪ್ ಪ್ರಾಂಕೊ ಮುಳಕ್ಕಲ್ ಸಲ್ಲಿಸಿದ ಮನವಿಯನ್ನು ಹೋಲಿ ಫಾದರ್ ಅವರು ಸ್ವೀಕರಿಸಿದ್ದಾರೆ ಎಂದು ಕೆಥೋಲಿಕ್ ಕಾನ್ಫರೆನ್ಸ್ ಆಫ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.

 ತನ್ನ ಪ್ರಕರಣದಲ್ಲಿ ಹೋರಾಡಲು ಸಾಕಷ್ಟು ಸಮಯದ ಅಗತ್ಯತೆ ಇದೆ. ಆದುದರಿಂದ ಜಲಾಂಧರ್‌ನ ಡಯಾಸಿಸ್ ಮುಖ್ಯಸ್ಥ ಅಥವಾ ಬಿಷಪ್ ಸ್ಥಾನವನ್ನು ತಾತ್ಕಾಲಿಕವಾಗಿ ತ್ಯಜಿಸಲು ಅನುಮತಿ ಕೋರಿ ಪ್ರಾಂಕೊ ಮುಳಕ್ಕಲ್ ಪೋಪ್ ಫ್ರಾನ್ಸ್ ಅವರಿಗೆ ಪತ್ರ ಬರೆದಿದ್ದಾರೆ. ಸೆಪ್ಟಂಬರ್ 16 ದಿನಾಂಕದ ಪತ್ರದಲ್ಲಿ ಅವರು, ನಾನು ಹಲವು ಬಾರಿ ಕೇರಳಕ್ಕೆ ಹೋಗಿದ್ದೇನೆ. ಆದುದರಿಂದ ಡಯಾಸಿಸ್‌ನ ಜವಾಬ್ದಾರಿಯನ್ನು ತಾತ್ಕಾಲಿಕವಾಗಿ ಹಸ್ತಾಂತರಿಸಲು ಬಯಸುತ್ತೇನೆ. ಕೇರಳಕ್ಕೆ ತೆರಳುವ ಹಿನ್ನೆಲೆಯಲ್ಲಿ ಕಳೆದ ವಾರ ಪ್ರಾಂಕೊ ಮುಳಕ್ಕಲ್ ಅವರು ಜಲಾಂಧರ್ ಡಾಯಸಿಸ್‌ನ ಆಡಳಿತ ಜವಾಬ್ದಾರಿಯನ್ನು ಕಿರಿಯ ಪಾದ್ರಿಗೆ ವರ್ಗಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News