ನಾವು ನರಭಕ್ಷಕ ಹುಲಿಗಳಲ್ಲ: ಸುಪ್ರೀಂ ಕೋರ್ಟ್

Update: 2018-09-21 14:10 GMT

ಹೊಸದಿಲ್ಲಿ,ಸೆ.21: ನಾವು ನರಭಕ್ಷಕ ಹುಲಿಗಳಲ್ಲ, ಹೀಗಾಗಿ ವಿಷಯವೊಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದ್ದರೆ ಸರಕಾರಗಳು ಭಯಪಡಬೇಕಿಲ್ಲ ಎಂದು ನ್ಯಾಯಮೂರ್ತಿಗಳಾದ ಮದನ ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಸುಪ್ರೀಂ ಪೀಠವು ಹೇಳಿದೆ.

 ಟೈಮೆಕ್ಸ್ ಗ್ರೂಪ್ ಪರ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಅವರು,ಕಂಪನಿಯು ಆಂಧ್ರಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯನ್ನು ನಡೆಸುತ್ತಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಮಾಜಿ ಕಾರ್ಯದರ್ಶಿ ಇಎಎಸ್ ಶರ್ಮಾ ಅವರು ಸಲ್ಲಿಸಿರುವ ಅರ್ಜಿಯು ರಾಜ್ಯಸರಕಾರದ ಮೇಲೆ ಒತ್ತಡವನ್ನು ಹೇರುವ ಉದ್ದೇಶವನ್ನು ಹೊಂದಿದೆ ಎಂದು ವಾದಿಸಿದಾಗ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಟೈಮೆಕ್ಸ್ ಗ್ರುಪ್‌ನಿಂದ ಗಣಿಗಾರಿಕೆಯನ್ನು ಅಮಾನತುಗೊಳಿಸಿ ರಾಜ್ಯ ಸರಕಾರವ ಇತ್ತೀಚಿಗೆ ಹೊರಡಿಸಿರುವ ಆದೇಶದ ದಾಖಲೆಯನ್ನು ಆಂಧ್ರಪ್ರದೇಶದ ಪರ ನ್ಯಾಯವಾದಿಗಳು ನ್ಯಾಯಾಲಯದ ಮುಂದಿರಿಸಿದರು.

ಇದು ಅಕ್ರಮ ಗಣಿಗಾರಿಕೆಯ ಪ್ರಕರಣವಲ್ಲ,ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ರಾಜ್ಯವು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ರೋಹಟಗಿ ತಿಳಿಸಿದರು.

 ಶರ್ಮಾ ಪರ ಹಾಜರಾಗಿದ್ದ ವಕೀಲ ಪ್ರಶಾಂತ ಭೂಷಣ್ ಅವರು,ಸರಕಾರವು ಕೇವಲ ಗಣಿಗಾರಿಕೆ ಪರವಾನಿಗೆಯನ್ನು ಅಮಾನತುಗೊಳಿಸಿದೆ. ಆದರೆ ಅದು ಪರವಾನಿಗೆಯನ್ನು ರದ್ದುಗೊಳಿಸಬೇಕು ಮತ್ತು ಕಂಪನಿಯಿಂದ ನಷ್ಟವನ್ನು ವಸೂಲು ಮಾಡಬೇಕು ಎಂದು ವಾದಿಸಿದರು.

ರಾಜ್ಯ ಸರಕಾರದ ಆದೇಶವು ಅದರ ಮೇಲೆ ಒತ್ತಡ ಹೇರುವ ಅರ್ಜಿದಾರರ ಪ್ರಯತ್ನವನ್ನು ಯಶಸ್ವಿಗೊಳಿಸಿದೆ ಎಂದು ರೋಹಟಗಿ ಹೇಳಿದಾಗ, ಒಬ್ಬರೋ ಇಬ್ಬರೋ ವ್ಯಕ್ತಿಗಳ ಒತ್ತಡದಲ್ಲಿ ಸಿಲುಕಬೇಕಾದ ಅಸಹಾಯ ಸ್ಥಿತಿಯಲ್ಲಿ ರಾಜ್ಯ ಸರಕಾರವಿಲ್ಲ ಎಂದು ಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.

ಮುಇಂದಿನ ವಿಚಾರಣೆಯನ್ನು ಸೆ.27ಕ್ಕೆ ನಿಗದಿಗೊಳಿಸಲಾಗಿದೆ.

 ಟೈಮೆಕ್ಸ್ ಕಂಪನಿಯು ಆಂಧ್ರಪ್ರದೇಶದಲ್ಲಿ ನಡೆಸುತ್ತಿರುವ ಅಕ್ರಮ ಗಣಿಕಾರಿಕೆಯ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ಅಥವಾ ಸಿಬಿಐನಿಂದ ತನಿಖೆಯನ್ನು ನಡೆಸುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಜು.9ರಂದು ಕೇಂದ್ರ,ಆಂದ್ರಪ್ರದೇಶ ಮತ್ತು ಕಂಪನಿಗಳಿಂದ ಉತ್ತರಗಳನ್ನು ಕೇಳಿತ್ತು.

ಟೈಮೆಕ್ಸ್ ಗ್ರುಪ್ ಅಕ್ರಮ ಗಣಿಗಾರಿಕೆ ಮತ್ತು ಕಾನೂನ ಬಾಹಿರ ಚಟುವಳಿಕೆಗಳಲಿ ತೊಡಿಗಿದೆ ಎಂದು ಶರ್ಮಾ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News