×
Ad

ರಾಫೆಲ್ ಗೆ ಅಂಬಾನಿ ಕಂಪೆನಿಯ ಹೆಸರು ಸೂಚಿಸಿದ್ದು ಭಾರತ ಸರಕಾರ: ಫ್ರಾನ್ಸ್ ಮಾಜಿ ಅಧ್ಯಕ್ಷ ಹೋಲಾಂಡ್

Update: 2018-09-21 19:42 IST

ಹೊಸದಿಲ್ಲಿ, ಸೆ.21: ರಾಫೆಲ್ ಡೀಲ್ ಗೆ ಭಾರತೀಯ ಸರಕಾರವೇ ಅನಿಲ್ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್ ನ ಹೆಸರನ್ನು ಸೂಚಿಸಿತ್ತು. ನಮಗೆ ಆಯ್ಕೆಗಳಿರಲಿಲ್ಲ ಎಂದು ಫ್ರಾನ್ಸ್ ನ ಮಾಜಿ ಅಧ್ಯಕ್ಷ ಫಾಂಕೋಯ್ಸ್ ಹೋಲಾಂಡ್ ಹೇಳಿದ್ದಾರೆ.

ಪ್ಯಾರಿಸ್ ಮೂಲದ ವೆಬ್ ಸೈಟ್ Mediapartಗೆ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಒಂದು ವೇಳೆ ಫ್ರಾಂಕೋಯ್ಸ್ ರ ಹೇಳಿಕೆ ನಿಜವಾಗಿದ್ದಲ್ಲಿ 36 ವಿಮಾನಗಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೋದಿ ಸರಕಾರದ ಹೇಳಿಕೆಗಳು ಸುಳ್ಳಾಗಲಿದೆ. ರಾಫೆಲ್ ಡೀಲ್ ಗೆ ಸಂಬಂಧಿಸಿ ರಿಲಾಯನ್ಸ್ ಡಿಫೆನ್ಸ್ ನ ಹೆಸರನ್ನು ಆಯ್ಕೆ ಮಾಡುವುದು ಸಂಪೂರ್ಣವಾಗಿ ಡಸ್ಸಾಲ್ಟ್ ಏವಿಯೇಶನ್ ನ ನಿರ್ಧಾರವಾಗಿತ್ತು ಎಂದು ಹಿರಿಯ ಸರಕಾರಿ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ.

ರಾಫೆಲ್ ವಿವಾದದ ಬಗ್ಗೆ ಶುಕ್ರವಾರ ವರದಿ ಪ್ರಕಟಿಸಿದ್ದ ಮೀಡಿಯಾಪಾರ್ಟ್ ಡಸ್ಸಾಲ್ಟ್ ಮತ್ತು ರಿಲಾಯನ್ಸ್ ನಡುವಿನ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಸಿತ್ತು. 2015ರ ಎಪ್ರಿಲ್ ನಲ್ಲಿ 36 ವಿಮಾನಗಳಿಗಾಗಿ ಫ್ರಾನ್ಸ್ ಮತ್ತು ಭಾರತದ ನಡುವೆ ಅಂತರಸರಕಾರಿ ಒಪ್ಪಂದ ನಡೆದಾಗ ಫ್ರಾಂಕೋಯ್ಸ್ ಫ್ರಾನ್ಸ್ ನ ಅಧ್ಯಕ್ಷರಾಗಿದ್ದರು.

ಹೇಗೆ ಮತ್ತು ಯಾವು ರಿಲಾಯನ್ಸ್ ಅನ್ನು ಆಯ್ಕೆ ಮಾಡಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಫ್ರಾಂಕೋಯ್ಸ್, ಆ ವಿಷಯದ ಬಗ್ಗೆ ನಮಗೆ ಹೇಳಲು ಏನೂ ಇಲ್ಲ. ಭಾರತೀಯ ಸರಕಾರವೇ ಅವರ ಹೆಸರನ್ನು ಸೂಚಿಸಿತ್ತು. ಡಸ್ಸಾಲ್ಟ್ ಅಂಬಾನಿ ಜೊತೆ ಮಾತುಕತೆ ನಡೆಸಿತು. ನಮಗೆ ಯಾವುದೇ ಆಯ್ಕೆಗಳಿರಲಿಲ್ಲ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News