ವಿವಿ ಅಧಿಕಾರಿಗಳಿಂದ ಕಿರುಕುಳ ಆರೋಪ: ದಲಿತ ಸಂಶೋಧನ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ

Update: 2018-09-21 16:27 GMT

ಗೋರಖ್‌ಪುರ, ಸೆ. 21: ದೀನ್‌ದಯಾಳ್ ಉಪಾಧ್ಯಾಯ ಗೋರಖ್‌ಪುರ ವಿಶ್ವವಿದ್ಯಾನಿಲಯ (ಡಿಡಿಯು) ದ ಕಲಾ ವಿಭಾಗದ ಡೀನ್ ಹಾಗೂ ಮುಖ್ಯಸ್ಥರ ಕಿರುಕುಳದಿಂದ 25 ವರ್ಷದ ದಲಿತ ಸಂಶೋಧನಾ ವಿದ್ಯಾರ್ಥಿ ಗುರುವಾರ ವಿಷಸೇವಿಸಿ ಆತ್ಮಹತ್ಯೆ ಯತ್ನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಚೌರಿಚೌರಾದ ನಿವಾಸಿ ದೀಪಕ್ ಕುಮಾರ್ ಮೂರು ನಿಮಿಷಗಳ ವೀಡಿಯೊ ಚಿತ್ರೀಕರಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ವೈರಲ್ ಆದ ಈ ವೀಡಿಯೊದಲ್ಲಿ ದೀಪಕ್ ಕುಮಾರ್, ಕಲಾ ವಿಭಾಗದ ಮುಖ್ಯಸ್ಥ ಪ್ರೊ. ದ್ವಾರಿಕ ನಾಥ್ ಶ್ರೀವಾತ್ಸವ ಹಾಗೂ ಡೀನ್ ಚಂದ್ರ ಪ್ರಕಾಶ್ ಶ್ರೀವಾತ್ಸವ ಅವರು ಕಿರುಕುಳ ನೀಡಿರುವುದಾಗಿ ಹಾಗೂ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಅವರ ಕಾರಣ ಎಂಬುದಾಗಿ ಹೇಳಿದ್ದಾರೆ. ಸೆಪ್ಟಂಬರ್ 6ರಂದು ದೂರು ನೀಡಿದ ಹೊರತಾಗಿಯೂ ಡೀನ್ ಹಾಗೂ ವಿಭಾಗ ಮುಖ್ಯಸ್ಥರ ವಿರುದ್ಧ ಉಪ ಕುಲಪತಿ ವಿ.ಕೆ. ಸಿಂಗ್ ಕ್ರಮ ತೆಗೆದುಕೊಂಡಿಲ್ಲ ಎಂದು ವೀಡಿಯೊದಲ್ಲಿ ಅವರು ಆರೋಪಿಸಿದ್ದಾರೆ.

ಅದೇ ಕಟ್ಟಡದಲ್ಲಿ ಬಾಡಿಗೆಯಲ್ಲಿ ವಾಸಿಸುತ್ತಿರುವ ವಿಶ್ವವಿದ್ಯಾನಿಲಯ ಕೆಲವು ದಲಿತ ವಿದ್ಯಾರ್ಥಿಗಳು ವಿಷ ಸೇವಿಸಿ ಅಸ್ವಸ್ಥಗೊಂಡ ದೀಪಕ್ ಅವರನ್ನು ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ ಹಾಗೂ ವಿಭಾಗ ಮುಖ್ಯಸ್ಥರು ಹಾಗೂ ಡೀನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಮ್ಮ ಮೇಲಿನ ಆರೋಪವನ್ನು ಇಬ್ಬರೂ ಅಧ್ಯಾಪಕರು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News