ಕೇಂದ್ರದ ತೋಳ್ಬಲ ನೀತಿ ಕಾಶ್ಮೀರದಲ್ಲಿ ವಿಫಲ: ಮೆಹಬೂಬಾ ಮುಫ್ತಿ

Update: 2018-09-21 16:29 GMT

ಶ್ರೀನಗರ, ಸೆ.21: ಯಾವುದೇ ಸಮಸ್ಯೆಯನ್ನು ಸೌಹಾರ್ದ ಮಾತುಕತೆಯ ಮೂಲಕ ಪರಿಹರಿಸಬಹುದು. ಆದರೆ ಕಾಶ್ಮೀರದಲ್ಲಿ ಕೇಂದ್ರ ಸರಕಾರ ತೋಳ್ಬಲದ ಕಾರ್ಯನೀತಿಗೆ ಮುಂದಾಗಿದ್ದು ಅದು ಫಲ ನೀಡಿಲ್ಲ. ಇದೀಗ ಮಾತುಕತೆಯ ಮೂಲಕ ಪರಿಹಾರವೂ ಕನಸಿನ ಮಾತಾಗಿರುವಂತೆ ತೋರುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

 ಶೋಫಿಯಾನ್ ಜಿಲ್ಲೆಯಲ್ಲಿ ಮೂವರು ಪೊಲೀಸರನ್ನು ಅಪಹರಿಸಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿದ ಅವರು, ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರ ಅಪಹರಣ ಕೃತ್ಯ ಹೆಚ್ಚಿದ್ದು ಕೇಂದ್ರ ಸರಕಾರದ ತೋಳ್ಬಲದ ಕಾರ್ಯನೀತಿಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು. ಮಾತುಕತೆಯ ಮೂಲಕ ಪರಿಹಾರವೂ ಇದೀಗ ಕನಸಿನ ಮಾತಾಗಿರುವಂತೆ ತೋರುತ್ತಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News