ಮಂಟೊ ಸಿನೆಮಾದ ಬೆಳಗ್ಗಿನ ಪ್ರದರ್ಶನ ರದ್ದು

Update: 2018-09-21 17:32 GMT

ಹೊಸದಿಲ್ಲಿ, ಸೆ.21: ನಂದಿತಾ ದಾಸ್ ಅವರ ಬಹುನಿರೀಕ್ಷಿತ ಸಿನೆಮಾ ‘ಮಂಟೊ’ದ ಬೆಳಗ್ಗಿನ ಪ್ರದರ್ಶನವನ್ನು ಹಲವಾರು ಪ್ರಮುಖ ನಗರಗಳಲ್ಲಿ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಸಾಹಿತಿ ಸಾದತ್ ಹಸನ್ ಮಂಟೊ ಅವರ ಜೀವನ ಕಥೆಯನ್ನಾಧರಿಸಿದ ಈ ಸಿನೆಮದಲ್ಲಿ ನಟ ನವಾಝುದ್ದೀನ್ ಸಿದ್ದಿಖಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಎಚ್‌ಪಿ ಸ್ಟುಡಿಯೋ ಸಹನಿರ್ಮಾಣದಲ್ಲಿ ನಟಿ ನಂದಿತಾ ದಾಸ್ ಈ ಸಿನೆಮವನ್ನು ನಿರ್ದೇಶಿಸಿದ್ದಾರೆ. ಶುಕ್ರವಾರ (ಸೆ.21ರಂದು) ಬಿಡುಗಡೆಯಾಗಿರುವ ಈ ಸಿನೆಮದ ಪ್ರಥಮ ದಿನ ದಿಲ್ಲಿ, ನೋಯ್ಡ, ಮುಂಬೈ, ಪುಣೆ ಹಾಗೂ ಅಹ್ಮದಾಬಾದ್‌ನಲ್ಲಿ ಬೆಳಗ್ಗಿನ ಪ್ರದರ್ಶನವನ್ನು ರದ್ದುಗೊಳಿಸಲಾಗಿದ್ದು, ಇದು ನಿಜಕ್ಕೂ ಆಘಾತಕಾರಿಯಾಗಿದೆ ಎಂದು ನಂದಿತಾ ದಾಸ್ ಟ್ವೀಟ್ ಮಾಡಿದ್ದಾರೆ.

ಮಂತೋಯಿಯತ್ ಹಾಡಿನ ಪ್ರಸಾರವನ್ನು ನಿಲ್ಲಿಸುವುದಿಲ್ಲ. ಆರು ವರ್ಷದ ಕಠಿಣ ದುಡಿಮೆ ಹಾಗೂ ಹಲವು ಜನರ ಸಂಘಟಿತ ಬದ್ಧತೆ ಮತ್ತು ಪರಿಶ್ರಮಕ್ಕೆ ನ್ಯಾಯ ದೊರಕಲಿದೆ ಎಂದು ಭಾವಿಸುತ್ತೇನೆ ಎಂದು ನಂದಿತಾ ಟ್ವೀಟ್ ಮಾಡಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News