ಬಂಧನ ಕೇಂದ್ರಗಳಲ್ಲಿ ವಿದೇಶಿಯರನ್ನು ಇರಿಸಲು ಮಾರ್ಗಸೂಚಿ ರೂಪಿಸಲಾಗುತ್ತಿದೆ: ಸುಪ್ರೀಂಗೆ ತಿಳಿಸಿದ ಕೇಂದ್ರ

Update: 2018-09-21 17:39 GMT

ಹೊಸದಿಲ್ಲಿ, ಸೆ. 21: ದೇಶಾದ್ಯಂತದ ಇರುವ ಬಂಧನ ಕೇಂದ್ರಗಳಲ್ಲಿ ವಿದೇಶಿ ಪ್ರಜೆಗಳನ್ನು ಇರಿಸುವುದಕ್ಕೆ ಮಾರ್ಗಸೂಚಿಗಳನ್ನು ರೂಪಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸರಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮಾರ್ಗಸೂಚಿ ರೂಪಿಸುವ ಪ್ರಕ್ರಿಯೆ ಮೂರು ತಿಂಗಳು ತೆಗೆದುಕೊಳ್ಳಲಿದೆ ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಹಾಗೂ ದೀಪಕ್ ಗುಪ್ತಾ ಅವರನ್ನು ಒಳಗೊಂಡ ಪೀಠಕ್ಕೆ ಸರಕಾರ ತಿಳಿಸಿತು. ಮೂರು ತಿಂಗಳು ಅಧಿಕವಾಯಿತು. ಮಾರ್ಗಸೂಚಿಯನ್ನು ಕೂಡಲೇ ರೂಪಿಸುವ ಅಗತ್ಯತೆ ಇದೆ. ಎರಡು ತಿಂಗಳ ಒಳಗೆ ತಡೆ ಕೈಪಿಡಿ ಸಿದ್ಧವಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಪೀಠ ಹೇಳಿದೆ. ಅಸ್ಸಾಂನಲ್ಲಿ ಬಂಧನ ಕೇಂದ್ರಗಳ ಸ್ಥಿತಿಗತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪೀಠ ವಿಚಾರಣೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News