ಆಮಿರ್ ಸಿನೆಮಾ ಕಿತ್ತುಕೊಂಡರೇ ಜಾನ್ ಅಬ್ರಹಾಂ?

Update: 2018-09-22 17:42 GMT

1999ರಲ್ಲಿ ತೆರೆಕಂಡಿದ್ದ ಸರ್ಫರೋಷ್ ಸಿನೆಮಾ ಬಹಳಷ್ಟು ಯಶಸ್ಸು ಕಂಡಿತ್ತು. ಉತ್ತಮ ಕತೆ, ಉತ್ತಮ ಹಾಡುಗಳು ಮತ್ತು ಆಮಿರ್ ಖಾನ್ ಹಾಗೂ ನಾಸೀರುದ್ದೀನ್ ಶಾರ ಅತ್ಯುತ್ತಮ ನಟನೆ ಈ ಚಿತ್ರವನ್ನು ಬೇರೆ ಹಂತಕ್ಕೆ ಕೊಂಡೊಯ್ದಿತ್ತು. ಇದೀಗ ಸರ್ಫರೋಷ್ ಚಿತ್ರದ ಎರಡನೇ ಅವತರಣಿಕೆ ಸರ್ಫರೋಷ್ 2 ಸಿದ್ಧವಾಗುತ್ತಿದೆ. ಸರ್ಫರೋಷ್ 2 ಸಿನೆಮಾದಲ್ಲಿ ಆಮಿರ್ ಖಾನ್ ಬದಲು ಜಾನ್ ಅಬ್ರಹಾಂ ನಟಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಾನ್ ಹೊಡಿಬಡಿ ಸಿನೆಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಸತ್ಯಮೇವ ಜಯತೇಯಂತೂ ಆ್ಯಕ್ಷನ್ ಸಿನೆಮಾ ಪ್ರಿಯರಿಗೆ ಹಬ್ಬದೂಟವಾಗಿತ್ತು. ಸರ್ಫರೋಷ್ 2 ಚಿತ್ರದಲ್ಲಿ ಆಮಿರ್ ಬದಲು ತಾನು ನಟಿಸುತ್ತಿರುವ ಬಗ್ಗೆ ಮಾತನಾಡಿರುವ ಜಾನ್, ಆಮಿರ್ ಅಂದರೆ ನನಗಿಷ್ಟ. ನಾನು ಅವರ ಅಭಿಮಾನಿ. ಅವರು ಮಾಡಿದಂಥ ಪಾತ್ರವನ್ನು ಮಾಡುವುದೇ ನನಗೆ ಗೌರವದ ವಿಷಯ ಎಂದು ಹೇಳಿದ್ದಾರೆ. ಅಂದ ಹಾಗೆ, ಸರ್ಫರೋಷ್ ಚಿತ್ರ ಅಂದು ಆಮಿರ್ ಚಿತ್ರಜೀವನದ ಹೊಸ ಮೈಲುಗಲ್ಲಾಗಿತ್ತು. ಇದೀಗ ಸರ್ಫರೋಷ್ 2 ಜಾನ್ ಚಿತ್ರಜೀವನಕ್ಕೆ ಯಾವ ಬದಲಾವಣೆ ತರುತ್ತದೆ ಎಂದು ಚಿತ್ರದ ಬಿಡುಗಡೆ ನಂತರವೇ ತಿಳಿಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News