ಕಾಂಗ್ರೆಸ್ ಪಾಕಿಸ್ತಾನದೊಂದಿಗೆ ಮಹಾಮೈತ್ರಿ ಮಾಡಿಕೊಂಡಿದೆಯೇ: ಶಾ ಪ್ರಶ್ನೆ

Update: 2018-09-23 13:24 GMT

ಹೊಸದಿಲ್ಲಿ, ಸೆ.23: ಪಾಕಿಸ್ತಾನ ಹಾಗೂ ಕಾಂಗ್ರೆಸ್ ಪಕ್ಷ ಎರಡೂ ‘ಮೋದಿ ತೊಲಗಿಸಿ’ ಎಂಬ ಒಂದೇ ಮಂತ್ರ ಜಪಿಸುತ್ತಿರುವುದನ್ನು ಕಂಡರೆ ಕಾಂಗ್ರೆಸ್ ಪಕ್ಷವು ಪಾಕಿಸ್ತಾನದೊಂದಿಗೆ ಮಹಾಮೈತ್ರಿ ಮಾಡಿಕೊಂಡಿದೆಯೇ ಎಂಬ ಅನುಮಾನ ಮೂಡುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ. ರಫೇಲ್ ಒಪ್ಪಂದದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ರಾಹುಲ್ ಮಾಡಿದ್ದ ಟ್ವೀಟ್‌ಗಳಿಗೆ ಪಾಕಿಸ್ತಾನದ ಸಚಿವ ಫವಾದ್ ಹುಸೈನ್ ಟ್ಯಾಗ್ ಮಾಡಿ, ಈ ಟೀಕೆಗಳು ಪಾಕಿಸ್ತಾನದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ದೂಷಣ ಪರಂಪರೆಯನ್ನು ವಿವರಿಸುತ್ತದೆ ಎಂದು ಟ್ವೀಟ್ ಮಾಡಿದ್ದರು.  

ರಾಹುಲ್ ಗಾಂಧಿ ಮೋದಿ ಹಟಾವೊ ಎನ್ನುತ್ತಿದ್ದಾರೆ. ಪಾಕಿಸ್ತಾನ ಕೂಡಾ ಇದೇ ರೀತಿ ಹೇಳುತ್ತಿದೆ. ಈಗ ಮೋದಿ ವಿರುದ್ಧ ರಾಹುಲ್ ಗಾಂಧಿ ಮಾಡುತ್ತಿರುವ ಆಧಾರರಹಿತ ಆರೋಪಗಳಿಗೆ ಕೂಡಾ ಪಾಕಿಸ್ತಾನ ಬೆಂಬಲ ನೀಡುತ್ತಿದೆ . ಇದನ್ನು ನೋಡಿದರೆ ಕಾಂಗ್ರೆಸ್ ಪಕ್ಷವು ಮೋದಿ ವಿರುದ್ಧ ಅಂತಾರಾಷ್ಟ್ರೀಯ ಮೈತ್ರಿಕೂಟವನ್ನು ರೂಪಿಸುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿರುವ ಅಮಿತ್ ಶಾ, ಈ ಟ್ವೀಟ್‌ಗೆ ‘ನಾ ಪಾಕ್, ನಾ ಕಾಂಗ್ರೆಸ್’(ಪಾಕಿಸ್ತಾನವೂ ಅಲ್ಲ, ಕಾಂಗ್ರೆಸ್ಸೂ ಅಲ್ಲ) ಎಂಬ ಹ್ಯಾಷ್‌ಟ್ಯಾಗ್ ಬಳಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News