ಹೊಲ್ಲಾಂಡ್ ಹೇಳಿಕೆ, ರಾಹುಲ್ ಟ್ವೀಟ್ ಪೂರ್ವಯೋಜಿತ: ಜೇಟ್ಲಿ

Update: 2018-09-23 13:40 GMT

ಹೊಸದಿಲ್ಲಿ, ಸೆ.22: ಆಗಸ್ಟ್ 30ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ ಕೆಲ ವಾರಗಳಲ್ಲಿ ರಫೇಲ್ ಒಪ್ಪಂದದ ಕುರಿತ ವಿವಾದದ ಹಿನ್ನೆಲೆಯಲ್ಲಿ ಬಂಕರ್ ಬೇಧಿಸುವ ಬಾಂಬ್ ಸ್ಫೋಟವಾಗಲಿದೆ ಎಂದು ಟ್ವೀಟ್ ಮಾಡಿದ್ದರು. ಇದಾದ ಕೆಲ ದಿನಗಳಲ್ಲೇ ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡ್ ಹೇಳಿಕೆ ಹೊರಬಿದ್ದಿದೆ. ಇದು ಖಂಡಿತಾ ಕಾಕತಾಳೀಯವಲ್ಲ. ಉಭಯ ದೇಶಗಳ ವಿಪಕ್ಷ ನಾಯಕರು ಒಂದೇ ರೀತಿಯ ಹೇಳಿಕೆ ನೀಡಿರುವ ಮಧ್ಯೆ ‘ಲಿಂಕ್’ ಇರುವಂತೆ ಕಾಣುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಆರೋಪಿಸಿದ್ದಾರೆ. 

ಈ ಎರಡೂ ಹೇಳಿಕೆಗಳ ಸಾಮ್ಯತೆಯನ್ನು ಗಮನಿಸಿದರೆ ಇದೊಂದು ಪೂರ್ವಯೋಜಿತ ಕೃತ್ಯವಾಗಿರುವ ಸಾಧ್ಯತೆಯಿದೆ. ರಾಹುಲ್ ಅವರೀಗ ಸೇಡಿನ ಮನಸ್ಥಿತಿಯಲ್ಲಿದ್ದಾರೆಂದು ಅನಿಸುತ್ತದೆ. ಈ ಎಲ್ಲಾ ವಿಷಯಗಳೂ ಪೂರ್ವಯೋಜಿತವಾಗಿರಬಹುದು ಎಂದು ಜೇಟ್ಲಿ ಹೇಳಿದರು. ಫ್ರಾನ್ಸ್ ಮತ್ತು ಭಾರತದ ವಿಪಕ್ಷ ನಾಯಕರು ಪರಸ್ಪರ ಕೈಜೋಡಿಸಿದ್ದಾರೆ ಎಂಬುದು ಇದರರ್ಥವೇ ಎಂಬ ಪ್ರಶ್ನೆಗೆ, ಇದು ತನಗೆ ತಿಳಿಯದು. ಆದರೆ ಉಭಯ ನಾಯಕರ ಹೇಳಿಕೆ ಸಂಪೂರ್ಣ ಕಾಕತಾಳೀಯವಾಗಿದೆ ಎಂದರು. ಆಗಸ್ಟ್ 30ರಂದು ಟ್ವೀಟ್ ಮಾಡಿದ್ದ ರಾಹುಲ್, ಭ್ರಷ್ಟಾಚಾರದ ಜಾಗತೀಕರಣವಾಗಿದೆ.

ಈ ರಫೇಲ್ ಯುದ್ಧವಿಮಾನ ನಿಜಕ್ಕೂ ವೇಗವಾಗಿ ಹಾಗೂ ದೂರಕ್ಕೆ ಹಾರುತ್ತದೆ. ಮುಂದಿನ ಕೆಲ ವಾರಗಳಲ್ಲಿ ಇದು ಬಂಕರ್ ಸ್ಫೋಟಿಸುವ ಬಾಂಬ್‌ಗಳನ್ನು ಎಸೆಯಲಿದೆ. ಮೋದೀಜಿ, ದಯವಿಟ್ಟು ಅನಿಲ್(ಅಂಬಾನಿ)ಗೆ ತಿಳಿಸಿ, ಫ್ರಾನ್ಸ್‌ನಲ್ಲಿ ಅವರಿಗೆ ಗಂಭೀರ ಸಮಸ್ಯೆ ಎದುರಾಗಲಿದೆ ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News