ತಮಿಳುನಾಡು: ಶಾಲೆಗಳಲ್ಲಿ ಬ್ಯಾಂಡ್, ಟ್ಯಾಟೂ ಜಾತಿ ಸಂಕೇತ

Update: 2018-09-23 15:16 GMT

ಚೆನ್ನೈ, ಸೆ. 23: ಬಣ್ಣದ ಪಟ್ಟಿ ಹಾಗೂ ಟ್ಯಾಟೂಗಳು ಹಲವರಿಗೆ ಫ್ಯಾನ್ಸಿ ಅಥವಾ ಕಲಾ ರೂಪ ಆಗಿರಬಹುದು. ಆದರೆ, ತಮಿಳುನಾಡಿನ ಕಡಲೂರು ಜಿಲ್ಲೆಯ ಹಲವು ಶಾಲೆಗಳಲ್ಲಿ ಇವುಗಳು ವಿದ್ಯಾರ್ಥಿಗಳ ಜಾತಿಯ ಸಂಕೇತ.

ಉತ್ತರ ತಮಿಳುನಾಡಿನ ಕಡಲೂರು ಹಿಂದುಳಿದ ವರ್ಗದ ವಣ್ಣಿಯಾರ್ ಪ್ರಾಬಲ್ಯದ ಪ್ರದೇಶ. ಇಲ್ಲಿಯ ಎರಡನೇ ಅತ್ಯಧಿಕ ಜನಸಂಖ್ಯೆ ಪರಿಶಿಷ್ಟ ಜಾತಿ ಜನರದ್ದು. ಇಲ್ಲಿ ಪರಿಶಿಷ್ಟ ಜಾತಿ ಜನರ ಸಂಖ್ಯೆ ಶೇ. 30 ಇದೆ. ಈ ಎರಡು ಸಮುದಾಯಗಳಿಗೆ ದೀರ್ಘ ಕಾಲದಿಂದ ವೈಷಮ್ಯ ಇದೆ.

 ಈ ಹಿನ್ನೆಯಲ್ಲಿ ಕೆಂಪು ಹಾಗೂ ನೀಲಿ ಮಣಿಕಟ್ಟು ಪಟ್ಟಿ ಧರಿಸುವವರು ತುಳಿತಕ್ಕೊಳಗಾದ ಜನರು ಅಥವಾ ದಲಿತ ಮೂಲದ ರಾಜಕೀಯ ಪಕ್ಷಕ್ಕೆ ಬೆಂಬಲಿಸುವವರನ್ನು ಸೂಚಿಸುತ್ತದೆ. ಹಳದಿ ಹಾಗೂ ಹಸಿರು ವಣ್ಣಿಯಾರ್ ಹಾಗೂ ಈ ಸಮದಾಯ ಬೆಂಬಲ ನೀಡುವ ರಾಜಕೀಯ ಪಕ್ಷದ ಬೆಂಬಲಿಗರನ್ನು ಸೂಚಿಸುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಒಂದು ನಕ್ಷತ್ರ ಅಥವಾ ಮಾವಿನ ಹಣ್ಣಿ ಚಿತ್ರದ ಟ್ಯಾಟೋ ಹಾಕಿಸಿಕೊಳ್ಳುವ ಮೂಲಕ ತಮ್ಮ ಜಾತಿಯನ್ನು ಹಾಗೂ ತಾವು ಬೆಂಬಲಿಸುವ ರಾಜಕೀಯ ಪಕ್ಷವನ್ನು ವಿದ್ಯಾರ್ಥಿಗಳು ಪ್ರತಿನಿಧಿಸುತ್ತಾರೆ.

ಇನ್‌ಶರ್ಟ್ ಮಾಡುವುದು, ಬಾಲಕರು ಬಾಲಕಿಯರೊಂದಿಗೆ ಮಾತನಾಡುವುದು, ಇಸ್ತ್ರಿ ಹಾಕಿದ ಬಟ್ಟೆ ಹಾಕಿ ಕೊಳ್ಳುವುದು, ಸುಂದರವಾಗಿ ಕೂದಲು ಕತ್ತರಿಸಿಕೊಳ್ಳುವುದು ಎರಡು ಜಾತಿಗಳ ವಿದ್ಯಾರ್ಥಿಗಳ ನಡುವೆ ಆಗಾಗ ಸಂಘರ್ಷ ಉಂಟಾಗಲು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಕಛೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘‘ಶಾಲೆಯಲ್ಲಿ ಜಾತಿ ಸಂಘರ್ಷ ಯಾವಾಗಲೂ ನಡೆಯುತ್ತಿರುತ್ತದೆ. ಕೆಲವು ಅಧ್ಯಾಪಕರು ಕೂಡ ತಾರತಮ್ಯ ತೋರಿಸುತ್ತಾರೆ. ಕೆಳವರ್ಗದ ವಿದ್ಯಾರ್ಥಿಗಳನ್ನು ನಿಕೃಷ್ಟವಾಗಿ ನೋಡುತ್ತಾರೆ’’ ಎಂದು ಅವರು ತಿಳಿಸಿದ್ದಾರೆ.

  ಈ ಜಾತಿ ಆಧರಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಘರ್ಷಣೆ ಬಗ್ಗೆ ಇಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮೂರು ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕುಡಲೂರಿನ ಉಪ ಜಿಲ್ಲಾಧಿಕಾರಿ ಜೋನಿ ಟಾಮ್ ವರ್ಗೀಸ್ ಅಧಿಕಾರದ ಅವಧಿಯಲ್ಲಿ ಶಾಲೆಗಳು ರಾಜಕೀಯ ಹಾಗೂ ಚುನಾವಣಾ ಪ್ರಚಾರದಿಂದ ದೂರವಿರಬೇಕು ಎಂಬ ನಿಯಮ ಅಂಗೀಕರಿಸಿದ್ದರು. ಅನಂತರ ಶಿಕ್ಷಣ ಇಲಾಖೆಗಳು ರಾಜ್ಯದ ಎಲ್ಲ ಶಾಲೆಗಳಲ್ಲಿ ಈ ನಿಯಮ ಅನುಷ್ಠಾನಗೊಳಿಸಿದ್ದವು. ಆದರೆ, ಈಗಲೂ ಈ ನಿಯಮ ನಿಯಮವಾಗಿಯೇ ಉಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News