ಬಂಧನದ ಬೆನ್ನಲ್ಲೇ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಡಾ.ಕಫೀಲ್ ಖಾನ್ ಬಿಡುಗಡೆ

Update: 2018-09-23 15:46 GMT

ಬಹ್ರೈಚ್(ಉ.ಪ್ರ),ಸೆ.23: ಇಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ವಾದಿಸಿದ್ದಕ್ಕಾಗಿ ಮತ್ತು ರೋಗಿಗಳಿಗೆ ನೀಡಲಾಗುತ್ತಿದ್ದ ಚಿಕಿತ್ಸೆಗೆ ‘ವ್ಯತ್ಯಯ’ವನ್ನುಂಟು ಮಾಡಿದ್ದಕ್ಕಾಗಿ ಶನಿವಾರ ಬಂಧನಕ್ಕೊಳಗಾಗಿದ್ದ ಡಾ.ಕಫೀಲ್ ಖಾನ್ ಅವರು ಕೆಲವೇ ಗಂಟೆಗಳಲ್ಲಿ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಬಿಡುಗಡೆಗೊಂಡಿದ್ದಾರೆ.

ಕಳೆದ ವರ್ಷ ಗೋರಖ್ ಪುರದ ಸರಕಾರಿ ಸ್ವಾಮ್ಯದ ಬಿಆರ್‌ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯ ಕೊರತೆಯಿಂದ ಹಲವಾರು ಮಕ್ಕಳು ಸಾವನ್ನಪ್ಪಿದ್ದ ಪ್ರಕರಣದ ಒಂಭತ್ತು ಆರೋಪಿಗಳ ಪೈಕಿ ಓರ್ವರಾಗಿರುವ ಡಾ.ಖಾನ್ ಅವರು ಸದ್ಯ ಜಾಮೀನಿನಲ್ಲಿ ಹೊರಗಿದ್ದಾರೆ.

ಡಾ.ಖಾನ್ ಶನಿವಾರ ರಾತ್ರಿಯೇ ಬಹ್ರೈಚ್‌ನಿಂದ ತೆರಳಿದ್ದಾರೆ ಎಂದು ಎಎಸ್‌ಪಿ ಪ್ರತಾಪ್ ತಿಳಿಸಿದರು.

ರಾಜ್ಯದಲ್ಲಿ ಮಿದುಳು ಜ್ವರದಿಂದ ಸಂಭವಿಸುತ್ತಿರುವ ಸಾವುಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಲು ತೆರಳುತ್ತಿದ್ದಾಗ ಡಾ.ಖಾನ್ ಅವರನ್ನು ಬಂಧಿಸಲಾಗಿತ್ತು ಎಂದು ಅವರ ಸೋದರ ಆದಿಲ್ ಖಾನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News