ಲೋಕಸಭಾ ಚುನಾವಣೆ: 100 ಸ್ಥಾನಗಳಲ್ಲಿ ಸ್ಪರ್ಧಿಸಲಿರುವ ಆಪ್; 25ರಲ್ಲಿ ಗೆಲ್ಲುವ ಗುರಿ

Update: 2018-09-23 16:32 GMT

ಹೊಸದಿಲ್ಲಿ,ಸೆ.23: ಮುಂದಿನ ಲೋಕಸಭಾ ಚುನಾವಾಣೆಯಲ್ಲಿ ನೂರು ಸ್ಥಾನಗಳಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ನಿರ್ಧರಿಸಿದ್ದು ಈ ಪೈಕಿ ಕನಿಷ್ಟ 25 ಸ್ಥಾನಗಳಲ್ಲಿ ಜಯಿಸುವ ಗುರಿಯನ್ನು ಹೊಂದಿದೆ. ಆಮೂಲಕ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಂತರ ಬಿಜೆಪಿಯೇತರ ಸರಕಾರ ರೂಪುಗೊಂಡಲ್ಲಿ ತನ್ನ ಸ್ಥಾನವನ್ನು ಉತ್ತಮಗೊಳಿಸಲು ನಿರ್ಧರಿಸಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. 2019ರ ಚುನಾವಣೆಯಲ್ಲಿ ಆಪ್ 25 ಸ್ಥಾನಗಳನ್ನು ಗೆದ್ದರೆ ಬಿಜೆಪಿಯೇತರ ಸರಕಾರ ರಚನೆಯಾಗುವ ಸಂದರ್ಭದಲ್ಲಿ ಇತರ ಪಕ್ಷಗಳು ಜೊತೆ ಮಂತ್ರಿ ಪದವಿ ಹಾಗೂ ಇತರ ವಿಚಾರಗಳಲ್ಲಿ ಚರ್ಚೆ ನಡೆಸಲು ಉತ್ತಮ ಅವಕಾಶ ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.

ನಾವು ನೂರು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು ಪಕ್ಷವು ಹೆಚ್ಚಿನ ಬೆಂಬಲಿಗರನ್ನು ಹೊಂದಿರುವ ಮತ್ತು ಪರಿಣಾಮಕಾರಿ ಸಂಘಟನಾ ಶಕ್ತಿಯನ್ನು ಹೊಂದಿರುವ ದಿಲ್ಲಿ, ಹರ್ಯಾಣ ಮತ್ತು ಪಂಜಾಬ್‌ನಲ್ಲಿ ಕನಿಷ್ಟ 25 ಸ್ಥಾನಗಳಲ್ಲಿ ಜಯ ಗಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದ್ದೇವೆ ಎಂದು ಮುಖಂಡರು ತಿಳಿಸಿದ್ದಾರೆ. ದಿಲ್ಲಿ, ಹರ್ಯಾಣ ಮತ್ತು ಪಂಜಾಬ್ ಸೇರಿದಂತೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಚತ್ತೀಸ್‌ಗಡದಲ್ಲೂ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಅವರು ತಿಳಿಸಿದ್ದಾರೆ. ಬಿಹಾರ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಕೆಲವೊಂದು ಆಯ್ದ ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News