ಪಾವತಿ ಆ್ಯಪ್‌ನ ಖಾಸಗಿ ನೀತಿ ಬದಲಾಯಿಸಿದ ಗೂಗಲ್

Update: 2018-09-23 17:37 GMT

ಹೊಸದಿಲ್ಲಿ, ಸೆ. 23: ಗೂಗಲ್‌ನ ಭಾರತೀಯ ಪಾವತಿ ಆ್ಯಪ್ 'ಗೂಗಲ್ ಪೇ' ಜಾಹೀರಾತು ಹಾಗೂ ಇತರ ಉದ್ದೇಶಗಳಿಗಾಗಿ ಗ್ರಾಹಕರ ದತ್ತಾಂಶಗಳನ್ನು ಬಹಿರಂಗಪಡಿಸುವುದಕ್ಕೆ ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಪೇಟಿಎಂ ದೂರು ನೀಡಿದ ಬಳಿಕ ಗೂಗಲ್ ಕಳೆದ ವಾರ ತನ್ನ ಆ್ಯಪ್‌ನ ಖಾಸಗಿ ನೀತಿಯಲ್ಲಿ ಬದಲಾವಣೆ ತಂದಿದೆ. ಗೂಗಲ್ ಪೇ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಪೇಟಿಎಂ ಗೂಗಲ್ ಪೇ ವಿರುದ್ಧ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾಕ್ಕೆ ದೂರು ನೀಡಿತ್ತು. ಗೂಗಲ್ ಪೇ ಮೂಲಕ ವೈಯುಕ್ತಿಕ ದತ್ತಾಂಶ ಸಂಗ್ರಹಿಸಬಹುದು, ದಾಸ್ತಾನು ಮಾಡಬಹುದು, ಬಳಸಬಹುದು, ಬಹಿರಂಗಪಡಿಸಬಹುದು ಯಾವುದೇ ಸಂವಹನ ನಡೆಸಬಹುದು ಎಂದು ಈ ಹಿಂದೆ ಗೂಗಲ್‌ನ ಖಾಸಗಿ ನೀತಿ ಹೇಳಿತ್ತು.

 ಆದರೆ, ಅನಂತರ ಹಣ ಗಳಿಕೆ ಹಾಗೂ ದತ್ತಾಂಶ ಬಳಕೆ ನೀಡಿಕೆಯನ್ನು ಗ್ರಾಹಕರು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಈ ಬದಲಾವಣೆ ಮಾಡಲಾಗಿದೆ ಎಂದು ಗೂಗಲ್ ಸಮಜಾಯಿಷಿ ನೀಡಿದೆ.

 ಕಾಲದಿಂದ ಕಾಲಕ್ಕೆ ಹಾಗೂ ಉತ್ಪಾದನೆಯ ಲಕ್ಷಣ, ಅಭಿವೃದ್ಧಿಗೆ ಅನುಗುಣವಾಗಿ ಖಾಸಗಿ ನೀತಿಗಳಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಗೂಗಲ್ ವಕ್ತಾರ ಪೇಟಿಎಂ ದೂರನ್ನು ಉಲ್ಲೇಖಿಸಿದೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News