ರಫೇಲ್ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ

Update: 2018-09-23 18:41 GMT

ಮಾನ್ಯರೇ,

ಈಗ ಎಲ್ಲರ ದೃಷ್ಟಿ ರಫೇಲ್ ಯುದ್ಧ ವಿಮಾನ ಹಗರಣದ ಮೇಲೆ ನೆಟ್ಟಿದೆ. ಅದಕ್ಕಾಗಿ ಕರ್ನಾಟಕದ ಸರಕಾರ ಬೀಳಿಸಿ ರಾಷ್ಟ್ರಪತಿ ಆಡಳಿತ ಹೇರಿ ದೇಶದ ಜನರ ಮತ್ತು ಮಾಧ್ಯಮಗಳ ಗಮನ ಇತ್ತ ಕೇಂದ್ರಿತವಾಗುವಂತೆ ಮಾಡಿ, ತಾವು ರಫೇಲ್ ಹಗರಣದಿಂದ ಜಾರಿಕೊಳ್ಳುವ ಪ್ಲಾನ್ ಮೋದಿ-ಅಮಿತ್ ಶಾ ಮಾಡಿರುವುದು ಬೆಳಕಿಗೆ ಬಂದಿದೆ. ಅದಕ್ಕಾಗಿ ತ್ವರಿತವಾಗಿ 10 ಕಾಂಗ್ರೆಸ್ ಶಾಸಕರನ್ನು ಮುಂಬೈಗೆ ಕರೆದೊಯ್ಯುವ ತಂತ್ರವನ್ನು ಅಮಿತ್ ಶಾ ಮಾಡಿದ್ದಾರಂತೆ. ಒಬ್ಬೊಬ್ಬ ಶಾಸಕನಿಗೆ ಕೋಟಿ ಕೋಟಿ ರೂ. ಕೊಡುವ ವಾಗ್ದಾನ ಮಾಡಿದ್ದಾರೆ ಎನ್ನಲಾಗಿದೆ. ಮುಂದಿನ ವಾರ ಈ 10 ಕಾಂಗ್ರೆಸ್ ಶಾಸಕರಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಸಾಂವಿಧಾನಿಕ ಬಿಕ್ಕಟ್ಟು ಹುಟ್ಟು ಹಾಕಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರ ನಡೆದಿದೆಯಂತೆ. ರಫೇಲ್ ಹಗರಣದ ಬಗ್ಗೆ ಅತೀ ಆಕ್ರಮಣಕಾರಿಯಾಗಿ ಮಾತನಾಡುತ್ತಿರುವ ರಾಹುಲ್ ಗಾಂಧಿಗೆ ಹೀಗೆ ಕಠಿಣ ಪಾಠ ಕಲಿಸುವ ರಣತಂತ್ರ ಅಮಿತ್ ಶಾ ಮತ್ತು ಮೋದಿ ಮಾಡಿದ್ದಾರಂತೆ. ಇದು ಯಶಸ್ವಿ ಆದರೆ ಆಮೇಲೆ ರಫೇಲ್ ಹಗರಣದತ್ತ ಯಾರೂ ಗಮನ ಹರಿಸುವುದಿಲ್ಲ. ಮಾಧ್ಯಮಗಳು ಕರ್ನಾಟಕದ ರಾಜಕೀಯ ಬಿಕ್ಕಟ್ಟಿನ ಬಗ್ಗೆಯೇ ಚರ್ಚೆ-ಸಂವಾದದಲ್ಲಿ ಮಗ್ನರಾಗುತ್ತಾರೆ. ಹೀಗೆ ರಫೇಲ್ ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ.

Writer - ರಾಮಕೃಷ್ಣ ಎ.ಕೆ., ಬೆಂಗಳೂರು

contributor

Editor - ರಾಮಕೃಷ್ಣ ಎ.ಕೆ., ಬೆಂಗಳೂರು

contributor

Similar News