ಮನಾಲಿಯಲ್ಲಿ ಭಾರೀ ಮಳೆ: ಕಣ್ಣೆದುರೇ ಪ್ರವಾಹದಲ್ಲಿ ಕೊಚ್ಚಿ ಹೋದ ಬಸ್!

Update: 2018-09-24 05:04 GMT

ಹೊಸದಿಲ್ಲಿ, ಸೆ.24: ಖ್ಯಾತ ಪ್ರವಾಸಿ ತಾಣವಾದ ಮನಾಲಿಯಲ್ಲಿ ಬಿಯಾಸ್ ನದಿ ಪ್ರವಾಹದಲ್ಲಿ ಪ್ರವಾಸಿಗರ ಬಸ್ಸೊಂದು ನೋಡ ನೋಡುತ್ತಿದ್ದಂತೇ ಕೊಚ್ಚಿಹೋದ ಘಟನೆ ನಡೆದಿದೆ. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಕೊಚ್ಚಿಹೋದ ಬಸ್ಸಿನಲ್ಲಿ ಪ್ರಯಾಣಿಕರು ಯ ಇರಲಿಲ್ಲ.
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 127.4 ಮಿಲಿಮೀಟರ್ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ನೈರುತ್ಯ ಮುಂಗಾರು ರಾಜ್ಯದಲ್ಲಿ ಭಾರಿ ಮಳೆಗೆ ಕಾರಣವಾಗಿದ್ದು, ಅಲ್ಲಲ್ಲಿ ಭೂಕುಸಿತಗಳು ಸಂಭವಿಸಿದ್ದು, ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಬಿಯಾಸ್ ನದಿಯ ನೀರಿನ ಮಟ್ಟ ಅಪಾಯದ ಮಟ್ಟವನ್ನು ತಲುಪಿದ್ದು, ಮಂಡಿ ಜಿಲಲೆ ಹನೋಗಿ ದೇವಾಲಯ ಬಳಿ ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿಯ ಸಮಕ್ಕೆ ಹರಿಯುತ್ತಿದೆ. ಮಂಡಿ ಜಿಲ್ಲೆಯ ಆಟ್ ಎಂಬಲ್ಲಿ ಬಿಯಾಸ್ ನದಿ ನೀರು ಹೆದ್ದಾರಿಯಲ್ಲಿ ಹರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 3ರಲ್ಲಿ ಸಂಚಾರ ಸ್ಥಗಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News