ಆಧಾರ್‌ವನ್ನು ಕಡ್ಡಾಯಗೊಳಿಸಬಹುದೇ?: ನಾಳೆ ಸಂವಿಧಾನ ಪೀಠದ ತೀರ್ಪು ಪ್ರಕಟ

Update: 2018-09-25 15:00 GMT

ಹೊಸದಿಲ್ಲಿ, ಸೆ.25: ಆಧಾರ್ ಮತ್ತು 2019ರ ಆಧಾರ್ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತು ತನ್ನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ಪ್ರಕಟಿಸಲಿದೆ.

ಈ 29 ಅರ್ಜಿಗಳ ವಿಚಾರಣೆಯನ್ನು ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಕೆ ಸಿಕ್ರಿ, ಎ.ಎಂ.ಖನ್ವಿಲ್ಕರ್,ಡಿ.ವೈ.ಚಂದ್ರಚೂಡ ಮತ್ತು ಅಶೋಕ ಭೂಷಣ್ ಅವರ ಸಂವಿಧಾನ ಪೀಠವು ತೀರ್ಪನ್ನು ಕಾಯ್ದಿರಿಸಿ ಮೇ 10ರಂದು ಆದೇಶಿಸಿತ್ತು.

2018,ಜ.17ರಂದು ಆರಂಭಗೊಂಡಿದ್ದ ಅರ್ಜಿಗಳ ಅಂತಿಮ ವಿಚಾರಣೆಯು 38 ದಿನಗಳ ಕಾಲ ನಡೆದಿದ್ದು,ಇದು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ಎರಡನೇ ಅತ್ಯಂತ ಸುದೀರ್ಘ ವೌಖಿಕ ವಿಚಾರಣೆಯಾಗಿತ್ತು. ಇದಕ್ಕೂ ಮುನ್ನ ನಾಲ್ಕು ತಿಂಗಳುಗಳ ಕಾಲ ಪ್ರಕರಣದಲ್ಲಿ ವಾದವಿವಾದಗಳು ನಡೆದಿದ್ದವು.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರು ಕೇಂದ್ರವನ್ನು ಪ್ರತಿನಿಧಿಸಿದ್ದರೆ,ಕಪಿಲ್ ಸಿಬಲ್,ಪಿ.ಚಿದಂಬರಂ,ರಾಕೇಶ ದ್ವಿವೇದಿ, ಶ್ಯಾಮ ದಿವಾನ್,ಅರವಿಂದ ದಾತಾರ್‌ರಂತಹ ಹಿರಿಯ ನ್ಯಾಯವಾದಿಗಳು ವಿವಿಧ ಅರ್ಜಿದಾರರ ಪರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News