ಎಂಸಿಐ ನಡೆಸಲು ಸರಕಾರದಿಂದ ಸಮಿತಿ ರಚನೆ: ಅರುಣ್ ಜೇಟ್ಲಿ

Update: 2018-09-26 14:03 GMT

ಹೊಸದಿಲ್ಲಿ,ಸೆ.26: ಭಾರತೀಯ ವೈದ್ಯಕೀಯ ಮಂಡಳಿ(ಎಂಸಿಐ)ಯ ಬದಲಾಗಿ ನೂತನ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ಸ್ಥಾಪಿಸಲು ಉದ್ದೇಶಿಸಿರುವ ಮಸೂದೆಯು ಅಂಗೀಕಾರಗೊಳ್ಳುವವರೆಗೆ ಎಂಸಿಐ ಅನ್ನು ನಡೆಸಲು ಸಮಿತಿಯೊಂದನ್ನು ರಚಿಸಲು ಅಧ್ಯಾದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಅಂಕಿತ ಹಾಕಿದ್ದಾರೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮಸೂದೆಯು ಸದ್ಯಸಂಸತ್ತಿನಲ್ಲಿ ಬಾಕಿಯಿದೆ.

 ಎಂಸಿಐನ ಚುನಾಯಿತ ಮಂಡಳಿಯ ಅಧಿಕಾರಾವಧಿ ಶೀಘ್ರವೇ ಅಂತ್ಯಗೊಳ್ಳಲಿರುವುದರಿಂದ ಅದನ್ನು ನಡೆಸಲು ಸಮಿತಿಯೊಂದರ ರಚನೆ ಅಗತ್ಯವಾಗಿದೆ. ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್,ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಮತ್ತು ಡಾ.ನಿಖಿಲ್ ಟಂಡನ್ ಸೇರಿದಂತೆ ಖ್ಯಾತ ವೃತ್ತಿಪರರು ಈ ಸಮಿತಿಯ ಸದಸ್ಯರಾಗಿರಲಿದ್ದಾರೆ ಎಂದು ಜೇಟ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News