ಹೊಸ ದೂರಸಂಪರ್ಕ ನೀತಿಗೆ ಸಂಪುಟ ಅಂಗೀಕಾರ

Update: 2018-09-26 14:11 GMT

ಹೊಸದಿಲ್ಲಿ,ಸೆ.26: 6,80,000 ಕೋಟಿ ರೂ. ಹೂಡಿಕೆ ಆಕರ್ಷಿಸುವ ಮತ್ತು 2022ರ ವೇಳೆಗೆ 40 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ಹೊಂದಿರುವ ನೂತನ ದೂರಸಂಪರ್ಕ ನೀತಿ ಅಥವಾ ರಾಷ್ಟ್ರೀಯ ಡಿಜಿಟಲ್ ಕಮ್ಯೂನಿಕೇಶನ್ ನೀತಿ (ಎನ್‌ಡಿಸಿಪಿ) 2018ನ್ನು ಬುಧವಾರ ಸಂಪುಟ ಅಂಗೀಕರಿಸಿತು.

ಜಾಗತಿಕವಾಗಿ ಸಂವಹನ ವ್ಯವಸ್ಥೆಯು, ಮುಖ್ಯವಾಗಿ 5ಜಿ, ಅಂತರ್ಜಾಲ ಮತ್ತು ಮೆಶಿನ್ ಟು ಮೆಶಿನ್ ಸಂವಹನ ಅತ್ಯಂತ ವೇಗವಾಗಿ ಬದಲಾಗುತ್ತಿದೆ ಎಂದು ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ತಿಳಿಸಿದ್ದಾರೆ. ಗ್ರಾಹಕ ಕೇಂದ್ರಿತ ನೀತಿಯನ್ನು ಜಾರಿಗೆ ತರಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ಎಲ್ಲರಿಗೂ ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಒದಗಿಸುವುದು, 40 ಲಕ್ಷ ಉದ್ಯೋಗ ಸೃಷ್ಟಿ ಮತ್ತು ಜಾಗತಿಕ ಐಸಿಎಕ್ಸ್ ಸೂಚಿಯಲ್ಲಿ ಭಾರತದ ಶ್ರೇಯಾಂಕವನ್ನು 50ನೇ ಸ್ಥಾನಕ್ಕೆ ಏರಿಸುವುದು ಎನ್‌ಡಿಸಿಪಿ 2018ರ ಕೆಲವು ಉದ್ದೇಶಗಳಾಗಿವೆ.

ಸದ್ಯ ದೇಶದ ಜಿಡಿಪಿಗೆ ಶೇ.6ರ ಕಾಣಿಕೆ ನೀಡುತ್ತಿರುವ ದೂರಸಂಪರ್ಕ ಕ್ಷೇತ್ರವು ಮುಂದೆ ಶೇ.8ರಂತೆ ಕಾಣಿಕೆ ನೀಡಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಜೊತೆಗೆ 100 ಬಿಲಿಯನ್ ಡಾಲರ್ ಹೂಡಿಕೆ ಬರುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News