2016ರಲ್ಲಿ ಭಾರತದಲ್ಲಿ 9,034 ಮಕ್ಕಳ ಸಾಗಾಟ: ಕೈಲಾಸ್ ಸತ್ಯಾರ್ಥಿ

Update: 2018-09-27 14:59 GMT

ಹೊಸದಿಲ್ಲಿ, ಸೆ. 27: 2016 ವರ್ಷವೊಂದರಲ್ಲೇ 9,034 ಮಕ್ಕಳ ಸಾಗಾಟ ನಡೆದಿದೆ. 2015ರ ಅಂಕಿ-ಅಂಶಗಳಿಗೆ ಹೋಲಿಸಿದರೆ, ಇದು ಗಣನೀಯವಾಗಿ ಏರಿಕೆಯಾಗಿದೆ ಎಂದು ಕೈಲಾಸ್ ಸತ್ಯಾರ್ಥಿ ಮಕ್ಕಳ ಫೌಂಡೇಶನ್ ಗುರುವಾರ ಹೇಳಿದೆ. ತನ್ನ ಹೇಳಿಕೆಯಲ್ಲಿ 2106ರ ಕ್ರೈಮ್ ರೆಕಾರ್ಡ್ ಬ್ಯುರೋದ ಅಂಕಿ-ಅಂಶ ಉಲ್ಲೇಖಿಸಿದ ಫೌಂಡೇಶನ್, 2016ರಲ್ಲಿ 9,034 ಮಕ್ಕಳನ್ನು ಸಾಗಾಟ ಮಾಡಲಾಗಿದೆ. ಇದು 2015ರಲ್ಲಿ ಸಾಗಾಟ ಮಾಡಲಾಗಿದ್ದ 3,905ರಿಂದ ಶೇ. 131ರಷ್ಟು ಗಣನೀಯವಾಗಿ ಏರಿಕೆಯಾಗಿದೆ ಎಂದಿದೆ.

ಭಾರತದಲ್ಲಿ ಪ್ರೌಢವಸ್ಥೆಗೆ ಬಂದ ಶೇ. 40 ಬಾಲಕಿಯರು ಹಾಗೂ ಶೇ. 35 ಬಾಲಕರು ಶಾಲೆಯಿಂದ ಹೊರಗೆ ಇದ್ದಾರೆ ಎಂದು ನ್ಯಾಶನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್ (ಎನ್‌ಸಿಪಿಸಿಆರ್) ನ ಸದಸ್ಯೆ ಪ್ರಿಯಾಂಕ ಕನೂಂಗಾ ತಿಳಿಸಿದ್ದಾರೆ.

 ಬಡ ಕುಟುಂಬದ ಈ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಇವರು ಹೆಚ್ಚು ಮಾನವ ಸಾಗಾಟ ಮಾಡುವ ಸಂಚುಕೋರರಿಗೆ ಬಲಿಯಾಗುತ್ತಾರೆ. ಮಕ್ಕಳನ್ನು ರಕ್ಷಿಸಿದ ಬಳಿಕ, ಅವರನ್ನು ಅವರ ಕುಟುಂಬ ಹಿಂದೆ ಸ್ವೀಕರಿಸುತ್ತಾರೆ ಎಂದು ಯಾವುದೇ ಖಾತರಿ ಇಲ್ಲ. ಈ ಶಾಲೆ ಬಿಟ್ಟ ಮಕ್ಕಳು ಸುಲಭವಾಗಿ ಅಪರಾಧಕ್ಕೆ ತುತ್ತಾಗುತ್ತಾರೆ. ನಾವು ಇದನ್ನು ಗುರುತಿಸಬೇಕು ಎಂದು ದಿಲ್ಲಿ ಕಾನೂನು ಸೇವೆಯ ವಿಶೇಷ ಕಾರ್ಯದರ್ಶಿ ಗೀತಾಂಜಲಿ ಗೋಯಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News