×
Ad

ಸರಣಿ ಅತ್ಯಾಚಾರ: ಆರೋಪಿಯ ಬಂಧನ

Update: 2018-09-27 20:31 IST

ಮುಂಬೈ, ಸೆ. 27: ಮುಂಬೈ ಹಾಗೂ ನೆರೆಯ ಪ್ರದೇಶಗಳಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಹಾಗೂ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 13 ಪ್ರಕರಣಗಳಲ್ಲಿ ಬೇಕಾದವರಾಗಿದ್ದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ಎರಡು ಅಪರಾಧ ಪ್ರಕರಣಗಳ ಹಿನ್ನೆಲೆಯಲ್ಲಿ ಥಾಣೆ ಜಿಲ್ಲೆಯ ಸಮೀಪದ ಮೀರಾ ರಸ್ತೆ ಪ್ರದೇಶದಿಂದ ಸೇಲ್ಸ್‌ಮ್ಯಾನ್ ರೆಹಾನ್ ಖುರೇಶಿ ಅವರನ್ನು ನವಿ ಮುಂಬೈ ಕ್ರೈಮ್ ಬ್ರಾಂಚ್ ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈಯ ಕೊಳಗೇರಿ ಪ್ರದೇಶ, ನೆರೆಯ ನವಿ ಮುಂಬೈ ಪಟ್ಟಣ, ಥಾಣೆ ಹಾಗೂ ಪಾಲ್ಘಾರ್ ಜಿಲ್ಲೆಗಳಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ 13 ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪಾಲ್ಘಾರ್‌ನ ನಲ್ಲಸೊಪಾರದಲ್ಲಿ 13 ಹಾಗೂ 15 ವರ್ಷ ಪ್ರಾಯದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಬಳಿಕ ನವಿ ಮುಂಬೈ ಹಾಗೂ ಮಿತ್ರಾ ರಸ್ತೆ ರೈಲ್ವೆ ನಿಲ್ದಾಣದ ಸಿಸಿಟಿವಿ ಕೆಮರಾ ದೃಶ್ಯಾವಳಿಗಳ ಮೂಲಕ ಪ್ರಕರಣದ ತನಿಖೆ ನಡೆಸುತ್ತಿರುವ ನವಿ ಮುಂಬೈ ಕ್ರೈಮ್ ಬ್ರಾಂಚ್ ಆತನನ್ನು ಗುರುತಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News