ಅತ್ಯಾಚಾರ ಪ್ರಕರಣ: ಸ್ವಘೋಷಿತ ದೇವಮಾನವನಿಗೆ ಜೀವಾವಧಿ ಶಿಕ್ಷೆ

Update: 2018-09-27 15:03 GMT

ಜೈಪುರ, ಸೆ.27: ತನ್ನ ಅನುಯಾಯಿ ಮಹಿಳೆಯ ಮೇಲೆ ಒಂದು ವರ್ಷದ ಹಿಂದೆ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ ಅಲ್ವಾರ್‌ನ ಸ್ವಘೋಷಿತ ದೇವಮಾನವ ಫಲಾಹಾರಿ ಮಹಾರಾಜ್ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಅತ್ಯಾಚಾರ ಎಸಗಿದ್ದಕ್ಕೆ ಜೀವಾವಧಿ ಶಿಕ್ಷೆ, ಕ್ರಿಮಿನಲ್ ಬೆದರಿಕೆ ಒಡ್ಡಿದ್ದಕ್ಕಾಗಿ 2 ವರ್ಷದ ಜೈಲುಶಿಕ್ಷೆಯ ಜೊತೆ 1,00,000 ರೂ. ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜೇಂದ್ರ ಶರ್ಮ ತೀರ್ಪು ನೀಡಿದ್ದಾರೆ. ತನಗೆ ಉದ್ಯೋಗ ದೊರೆತು ಪ್ರಥಮ ವೇತನದಲ್ಲಿ 3,000 ರೂ. ಹಣವನ್ನು ‘ದೇವಮಾನವ’ನಿಗೆ ಅರ್ಪಿಸಲು 2017ರ ಆಗಸ್ಟ್ 7ರಂದು ಆತನ ಆಶ್ರಮಕ್ಕೆ ತೆರಳಿದ್ದಾಗ ಆಶ್ರಮದಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ 2017ರ ಸೆ.11ರಂದು ಮಹಿಳೆ ಎಫ್‌ಐಆರ್ ದಾಖಲಿಸಿದ್ದಳು. ದೂರುದಾರರು ನ್ಯಾಯಾಲಯದಲ್ಲಿ 31 ಸಾಕ್ಷಿಗಳನ್ನು, 78 ದಾಖಲೆಪತ್ರಗಳನ್ನು ಹಾಗೂ 22 ಅನುಚ್ಛೇದಗಳನ್ನು ಹಾಜರುಪಡಿಸಿದ್ದರು.

ಈ ಮಧ್ಯೆ, ಬಂಧನ ತಪ್ಪಿಸಿಕೊಳ್ಳಲು 60 ವರ್ಷದ ಸ್ವಘೋಷಿತ ದೇವಮಾನವ ಕಳೆದ ವರ್ಷ ಅಸೌಖ್ಯದ ಕಾರಣ ಒಡ್ಡಿ ಆಸ್ಪತ್ರೆಗೆ ದಾಖಲಾಗಿದ್ದ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News