×
Ad

ಯಂತ್ರದೊಳಗೆ ಸಿಲುಕಿ ಕಾರ್ಮಿಕ ಮೃತ್ಯು

Update: 2018-09-27 20:34 IST
ಸಾಂದರ್ಭಿಕ ಚಿತ್ರ

ನೋಯ್ಡ, ಸೆ. 27: ಯಂತ್ರ ಸ್ವಚ್ಚಗೊಳಿಸುತ್ತಿರುವಾಗ ಅದರೊಳಗೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನೋಯ್ಡ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಬುಧವಾರ ಸಂಭವಿಸಿದೆ.

ಬ್ಲೇಡ್‌ಗಳನ್ನು ಒಳಗೊಂಡ ದೊಡ್ಡ ಗ್ರಾತ್ರದ ಯಂತ್ರಕ್ಕೆ ಇನ್ನೋರ್ವ ಕಾರ್ಮಿಕ ಅರಿವಿಲ್ಲದೇ ಸ್ವಿಚ್ ಹಾಕಿದ ಕಾರಣಕ್ಕೆ ಈ ದುರ್ಘಟನೆ ಸಂಭವಿಸಿದೆ. ಫೇಸ್ 2 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನೋಯ್ಡ ವಿಶೇಷ ಆರ್ಥಿಕ ವಲಯದಲ್ಲಿ ಇರುವ ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರಿಸುವ ಫ್ಯಾಕ್ಟರಿಗೆ ವಾಜಿದ್ ಬೆಳಗ್ಗೆ ತಲುಪಿದ್ದರು. ಬ್ಲೇಡುಗಳುಳ್ಳ ದೊಡ್ಡ ಗಾತ್ರದ ಯಂತ್ರವನ್ನು ಅವರು ಸ್ವಚ್ಛಗೊಳಿಸುತ್ತಿದ್ದರು. ಈ ಸಂದರ್ಭ ಇನ್ನೋರ್ವ ಕಾರ್ಮಿಕ ಅರಿವಲ್ಲದೆ ಸ್ವಿಚ್ ಹಾಕಿದ್ದರು. ಇದರಿಂದ ವಾಜಿದ್ ಯಂತ್ರದೊಳಗೆ ಸಿಲುಕಿಕೊಂಡರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭ ಅವರ ಸಹೋದ್ಯೋಗಿಯೊಬ್ಬರಿಗೆ ಅರಿವಾಗಿ ಯಂತ್ರದ ಸ್ವಿಚ್ ಆಫ್ ಮಾಡಿದ್ದರು. ಆದರೆ, ಅವರು ಅದಾಗಲೇ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ. ಮೃತದೇಹವನ್ನು ಯಂತ್ರದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ವಾಜಿದ್ ಸಹೋದರ ನೀಡಿದ ದೂರಿನ ಅನ್ವಯ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News