×
Ad

ಸರ್ಜಿಕಲ್ ದಾಳಿಯ ಹೊಸ ವೀಡಿಯೊ ಬಿಡುಗಡೆ ಮಾಡಿದ ಕೇಂದ್ರ ಸರಕಾರ

Update: 2018-09-27 23:54 IST

ಹೊಸದಿಲ್ಲಿ, ಸೆ.27: ಗಡಿನಿಯಂತ್ರಣ ರೇಖೆ ಸಮೀಪದ ಪಾಕ್ ಉಗ್ರರ ಶಿಬಿರಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯ ಎರಡನೆ ವರ್ಷಾಚರಣೆಗೆ ಎರಡು ದಿನಗಳಿರುವಂತೆಯೇ ಕೇಂದ್ರ ಸರಕಾರವು, ಈ ಕಾರ್ಯಾಚರಣೆಯ ಹೊಸ ವೀಡಿಯೊವನ್ನು ಗುರುವಾರ ಬಿಡುಗಡೆಗೊಳಿಸಿದೆ. 2016ರಲ್ಲಿ ಜಮ್ಮುಕಾಶ್ಮೀರದ ಉರಿಯಲ್ಲಿನ ಸೇನಾಶಿಬಿರದ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಈ ಸರ್ಜಿಕಲ್ ದಾಳಿಯನ್ನು ನಡೆಸಿತ್ತು.

ಇಂದು ಬಿಡುಗಡೆಗೊಳಿಸಲಾದ ಸರ್ಜಿಕಲ್ ದಾಳಿಯ ವೀಡಿಯೊವನ್ನು ಡ್ರೋನ್ ವಿಮಾನಗಳ ಮೂಲಕ ಥರ್ಮಲ್ ಕ್ಯಾಮರಾಗಳಿಂದ ಸೆರೆಹಿಡಿಯಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಭಾರತೀಯ ಯೋಧರು, ಉಗ್ರರ ಶಿಬಿಗಳು ಹಾಗೂ ಉಗ್ರರು ಭಾರತದೊಳಗೆ ನುಸುಳಲು ಬಳಸುತ್ತಿದ್ದ ಪ್ರದೇಶದ ಸಮೀಪವೇ ಇರುವ ಪಾಕ್ ಠಾಣೆ ಸೇರಿದಂತೆ ನಾಲ್ಕು ಗುರಿಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯಗಳನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News