ಆಸ್ಕರ್‌ಗೆ ಎಂಟ್ರಿ ಕೊಟ್ಟ 'ವಿಲೇಜ್ ರಾಕ್‌ಸ್ಟಾರ್ಸ್‌'

Update: 2018-09-29 18:35 GMT

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಪ್ರಾದೇಶಿಕ ಸಿನೆಮಾಗಳು ಜೋರಾಗಿ ಸುದ್ದಿ ಮಾಡತೊಡಗಿವೆ. ಪ್ರಾದೇಶಿಕ ಸಿನೆಮಾಗಳು ಬಾಕ್ಸ್‌ಆಫೀಸ್‌ನಲ್ಲಿ ಸಾಲುಸಾಲಾಗಿ ಗೆಲ್ಲುತ್ತಿವೆ ಮಾತ್ರವಲ್ಲ, ಬಾಲಿವುಡ್ ಚಿತ್ರಗಳಿಗೆ ಸರಿಸಮಾನವಾದ ಸ್ಪರ್ಧೆಯನ್ನು ಒಡ್ಡಲಾರಂಭಿಸಿವೆ. ಇದೀಗ ಅಸ್ಸಾಮಿ ಚಿತ್ರವೊಂದು ಆಸ್ಕರ್ ಸ್ಪರ್ಧೆಗೆ ನಾಮಕರಣಗೊಳ್ಳುವ ಮೂಲಕ ಪ್ರಾದೇಶಿಕ ಚಿತ್ರಗಳ ಹಿರಿಮೆಗೆ ಇನ್ನೊಂದು ತುರಾಯಿ ಸೇರಿಸಿದೆ. ಹೌದು. ಖ್ಯಾತ ಅಸ್ಸಾಮಿ ನಿರ್ದೇಶಕಿ ರೀಮಾದಾಸ್ ಅವರ ವಿಲೇಜ್ ರಾಕ್‌ಸ್ಟಾರ್ಸ್, 2019ರ ಆಸ್ಕರ್ ಸ್ಪರ್ಧೆಗೆ ವಿದೇಶಿ ಭಾಷಾ ಚಿತ್ರಗಳ ಶ್ರೇಣಿಗೆ ಭಾರತದಿಂದ ಅಧಿಕೃತವಾಗಿ ನಾಮಕರಣಗೊಂಡಿದೆ. ಗಿಟಾರ್‌ವಾದಕಿಯಾಗಬೇಕೆಂಬ ಕನಸುಕಾಣುವ ಗ್ರಾಮೀಣ ಬಾಲಕಿಯೊಬ್ಬಳ ಕುರಿತಾದ ಕಥಾವಸ್ತುವನ್ನು ಹೊಂದಿರುವ ವಿಲೇಜ್ ರಾಕ್‌ಸ್ಟಾರ್ಸ್, 2018ರ ಶ್ರೇಷ್ಠ ಕಥಾಚಿತ್ರಕ್ಕಾಗಿನ ರಾಷ್ಟ್ರಪ್ರಶಸ್ತಿ ಕೂಡಾ ಗೆದ್ದಿತ್ತು.

ಈ ನಡುವೆ ನೆರೆಯ ರಾಷ್ಟ್ರವಾದ ಬಾಂಗ್ಲಾದೇಶ, ಆಸ್ಕರ್ ಸ್ಪರ್ಧೆಗೆ , ಗ್ಲೋಬಲ್ ಸ್ಟಾರ್ ಇರ್ಫಾನ್‌ಖಾನ್ ಅಭಿನಯದ ‘ನೋ ಬೆಡ್ ಆಫ್ ರೋಸಸ್’ ಚಿತ್ರವನ್ನು ಆಯ್ಕೆ ಮಾಡಿದೆ. ಭಾರತ ಹಾಗೂ ಬಾಂಗ್ಲಾ ಜಂಟಿಯಾಗಿ ನಿರ್ಮಿಸಿದ ಈ ಚಿತ್ರ ಶಾಂೈ, ಮಾಸ್ಕೋ, ವಾಂಕೋವರ್ ಚಿತ್ರೋತ್ಸವಗಳಲ್ಲಿ ಪ್ರದರ್ಶಿತಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. 2019ರ ಫೆಬ್ರವರಿ 24ರಂದು ಆಸ್ಕರ್ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈ ಚಿತ್ರದಲ್ಲಿ ಇರ್ಫಾನ್ ಖಾನ್ ಅವರು ಯಶಸ್ವಿ ಚಿತ್ರನಿರ್ಮಾಪಕ ಜಾವೇದ್ ಹಸನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಪುತ್ರಿಯ ಬಾಲ್ಯಸ್ನೇಹಿತೆಯ ಜೊತೆಗೆ ಚಿತ್ರದ ನಾಯಕ ಜಾವೇದ್ ನಡೆಸುವ ಸಲ್ಲಾಪವು ರಾಷ್ಟ್ರಮಟ್ಟದ ವಿವಾದವಾಗಿ ಪರಿಣಮಿಸುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ.

ಅವರ ಪತ್ನಿಯ ಪಾತ್ರದಲ್ಲಿ ರೊಕೆಯಾ ಪ್ರಾಚಿ ನಟಿಸಿದ್ದರೆ, ನುಸ್ರತ್ ಇಮ್ರಾಸ್ ತಿಶಾ, ಪುತ್ರಿಯಾಗಿ ಅಭಿನಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News