×
Ad

ಎಕೆ 47 ರೈಫಲ್‌ಗಳೊಂದಿಗೆ ಪರಾರಿಯಾಗಿದ್ದ ಎಸ್‌ಪಿಒ ಹಿಝ್ಬುಲ್ ಗುಂಪಿಗೆ ಸೇರ್ಪಡೆ

Update: 2018-10-01 20:56 IST

ಶ್ರೀನಗರ,ಅ.1: ಕಳೆದ ವಾರ ಏಳು ಎಕೆ 47 ರೈಫಲ್‌ಗಳು ಮತ್ತು ಒಂದು ಪಿಸ್ತೂಲಿನೊಂದಿಗೆ ಪರಾರಿಯಾಗಿದ್ದ ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ)ಯೋರ್ವ ಭಯೋತ್ಪಾದಕ ಸಂಘಟನೆ ಹಿಝ್ಬುಲ್ ಮುಜಾಹಿದೀನ್‌ಗೆ ಸೇರಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಶೋಪಿಯಾನ್ ಜಿಲ್ಲೆಯ ನಿವಾಸಿ,ಎಸ್‌ಪಿಒ ಆದಿಲ್ ಬಶೀರ್ ಎಕೆ 47 ರೈಫಲ್‌ನೊಂದಿಗೆ ಹಿಝ್ಬುಲ್ ಕಮಾಂಡರ್ ಝೀನತುಲ್ ಇಸ್ಲಾಂ ಜೊತೆ ನಿಂತುಕೊಂಡಿರುವ ಚಿತ್ರಗಳು ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಸೆ.28ರಂದು ಆದಿಲ್ ಬಶೀರ್ ಶ್ರೀನಗರದ ಜವಾಹರ ನಗರ ಪ್ರದೇಶದಲ್ಲಿರುವ ಶಾಸಕ ಎಝಾಜ್ ಮಿರ್ ಅವರ ಅಧಿಕೃತ ನಿವಾಸದಿಂದ ಶಸ್ತ್ರಾಸ್ತ್ರಗಳ ಸಹಿತ ಪರಾರಿಯಾಗಲು ನೆರವಾಗಿದ್ದ ನಾಗರಿಕನನ್ನು ತಾವು ಗುರುತಿಸಿರುವುದಾಗಿ ಪೊಲೀಸರು ತಿಳಿಸಿದರು.

ಘಟನೆ ನಡೆದಾಗ ಶಾಸಕರು ಜಮ್ಮುವಿನಲ್ಲಿದ್ದರು.

ಪೊಲೀಸರು ಶಾಸಕರ ಖಾಸಗಿ ಭದ್ರತಾ ಪಡೆಯ 10 ಜನರನ್ನು ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News