ನಕ್ಸಲ್‌ಪೀಡಿತ ಪ್ರದೇಶದಲ್ಲಿ ಬುಡಕಟ್ಟು ಜನರು ಮತ ಹಾಕುವಂತೆ ಪ್ರೇರೇಪಿಸಲು ಚು.ಆಯೋಗ ಹೊಸ ತಂತ್ರ

Update: 2018-10-01 15:28 GMT

ರಾಯ್‌ಪುರ, ಅ.1: ನಕ್ಸಲ್‌ಪೀಡಿತ ಚತ್ತೀಸ್‌ಗಡದಲ್ಲಿ ಜನರು ಮತ ಹಾಕಲು ಪ್ರೇರೇಪಿಸಲು ಮತ್ತು ಶೇ. ನೂರು ಮತ ಚಲಾವಣೆಯಾಗುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಹೊಸ ಅಭಿಯಾನವನ್ನು ರೂಪಿಸಿದೆ ಎಂದು ರಾಜ್ಯ ಸರಕಾರ ಸೋಮವಾರ ತಿಳಿಸಿದೆ.

 ಚತ್ತೀಸ್‌ಗಡದ ಬಿಲಾಸ್‌ಪುರದಲ್ಲಿ 2.10 ಲಕ್ಷಕ್ಕೂ ಅಧಿಕ ಮತದಾರರು, ಮತ ಹಾಕುತ್ತೇವೆ ಮತ್ತು ಶೇ. ನೂರು ಮತ ಚಲಾವಣೆಯನ್ನು ಖಾತರಿಪಡಿಸಲು ಇತರರನ್ನೂ ಮತ ಹಾಕುವಂತೆ ಪ್ರೇರೇಪಿಸುತ್ತೇವೆ ಎಂದು ಅಫಿದಾವಿತ್‌ಗೆ ಸಹಿ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಡಕಟ್ಟು ಬಾಹುಳ್ಯದ ಜಶ್‌ಪುರ ಜಿಲ್ಲೆಯಲ್ಲಿ ಚುನಾವಣಾ ಆಯೋಗ ಜಶ್ ಪ್ರಣ್ ಎಂಬ ವಿನೂತನ ಅಭಿಯಾನವನ್ನು ಆರಂಭಿಸಿ ಆಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2.10 ಲಕ್ಷಕ್ಕೂ ಅಧಿಕ ಜನರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದಾಗಿ ಅಫಿದಾವಿತ್‌ಗೆ ಸಹಿ ಹಾಕಿದ್ದಾರೆ. ಜಗತ್ತಿನಲ್ಲೇ ಅತೀಹೆಚ್ಚು ಜನರು ಭಾಗವಹಿಸಿದ ಕಾರ್ಯಕ್ರಮ ಇದಾಗಿದೆ. ಹಾಗಾಗಿ ಇದನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿಸಲು ಅರ್ಜಿ ಹಾಕಲಾಗಿದೆ ಎಂದು ಬಿಲಾಸ್‌ಪುರ ಜಿಲ್ಲಾ ಚುನಾವಣಾ ಅಧಿಕಾರಿ ಪಿ.ದಯಾನಂದ ತಿಳಿಸಿದ್ದಾರೆ. 91 ರೂ. ದಾಟಿದ ಪೆಟ್ರೋಲ್, ಎಲ್‌ಪಿಜಿ ಮತ್ತಷ್ಟು ತುಟ್ಟಿ ಹೊಸದಿಲ್ಲಿ, ಅ.1: ಪೆಟ್ರೋಲ್ ಬೆಲೆ ಸೋಮವಾರ ಮುಂಬೈಯಲ್ಲಿ 91ರೂ. ದಾಟಿದರೆ ಅಡುಗೆ ಅನಿಲ ದರ ಕೂಡಾ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು 500 ರೂ. ಗಡಿ ದಾಟಿತು. ಸೋಮವಾರ ಪೆಟ್ರೋಲ್ ಬೆಲೆಯಲ್ಲಿ 24 ಪೈಸೆ ಏರಿಕೆಯಾದರೆ ಡೀಸೆಲ್ 30 ಪೈಸೆ ಏರಿಕೆ ಕಂಡಿತು. ಈ ಏರಿಕೆಯ ಪರಿಣಾಮವಾಗಿ ದಿಲ್ಲಿ ಪೆಟ್ರೋಲ್ ಬೆಲೆ 83.73ರೂ. ತಲುಪಿದರೆ ಡೀಸೆಲ್ ದರ 75.09ರೂ. ತಲುಪಿದೆ. ಭಾರತವು ಮೂರನೇ ಅತಿದೊಡ್ಡ ತೈಲ ಆಮದುದಾರನಾಗಿದ್ದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಏರುತ್ತಿರುವ ತೈಲ ಬೆಲೆಗಳ ಪರಿಣಾಮವಾಗಿ ದೇಶದಲ್ಲಿ ಇಂಧನ ಬೆಲೆ ಗಣನೀಯ ಏರಿಕೆ ಕಾಣುತ್ತಿದೆ. ಜಗತ್ತಿನ ಅರ್ಧಕ್ಕೂ ಅಧಿಕ ತೈಲ ಅಗತ್ಯವನ್ನು ಪೂರೈಸುತ್ತಿರುವ ಬ್ರೆಂಟ್ ಕಚ್ಚಾತೈಲ, ಇರಾನ್ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧ ಮುಂದಿನ ತಿಂಗಳಿಂದ ಜಾರಿಗೆ ಬರುತ್ತಿರುವ ಕಾರಣ ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಧಿಕ ಏರಿಕೆಯನ್ನು ಕಂಡಿದೆ.

ಐದು ವಾರಗಳ ಹಿಂದೆ 71 ಡಾಲರ್ (5,135ರೂ.) ಇದ್ದ ಬ್ರೆಂಟ್ ಕಚ್ಚಾ ತೈಲ ಬೆಲೆ ಸದ್ಯ 83.27 ಡಾಲರ್ (6,022ರೂ.) ತಲುಪಿದೆ. ಇದೇ ಅವಧಿಯಲ್ಲಿ ಡಾಲರ್ ಎದುರು ರೂಪಾಯಿ ವೌಲ್ಯ ಶೇ.5ರಿಂದ6 ಕುಸಿದಿದೆ. ಪರಿಣಾಮವಾಗಿ ಕಚ್ಚಾತೈಲ ಆಮದು ಮತ್ತಷ್ಟು ತುಟ್ಟಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಮೂಲ ದರದ ಮೇಲೆ ಅತೀಹೆಚ್ಚು ಜಿಎಸ್‌ಟಿ ಹಾಕಲಾಗುವ ಕಾರಣ ಅಡುಗೆ ಅನಿಲದ 14.2ಕೆ.ಜಿ. ಸಿಲಿಂಡರ್ ದರ ಸೋಮವಾರ 2.89ರೂ. ಏರಿಕೆ ಕಂಡು 502.40ರೂ.ಗೆ ತಲುಪಿತು. ಇನ್ನು ಸಬ್ಸಿಡಿರಹಿತ ಎಲ್‌ಪಿಜಿ ಬೆಲೆಯಲ್ಲಿ 59ರೂ. ಏರಿಕೆಯಾಗಿದ್ದು ದಿಲ್ಲಿಯಲ್ಲಿ 879ರೂ. ತಲುಪಿದೆ. ಸಬ್ಸಿಡಿಸಹಿತ ಎಲ್‌ಪಿಜಿ ಗ್ರಾಹಕರ ಬ್ಯಾಂಕ್ ಖಾತೆಗೆ ಅಕ್ಟೋಬರ್‌ನಲ್ಲಿ 376.60ರೂ. ಸಬ್ಸಿಡಿ ಬಿದ್ದಿದ್ದರೆ ಕಳೆದ ತಿಂಗಳು 320.49ರೂ. ಸಬ್ಸಿಡಿ ಹಾಕಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News