ಡಾಟಿ ಮಹಾರಾಜ್ ವಿರುದ್ಧದ ಅತ್ಯಾಚಾರ ಪ್ರಕರಣ ಸಿಬಿಐಗೆ

Update: 2018-10-03 15:14 GMT

ಹೊಸದಿಲ್ಲಿ,ಅ.3: ಸ್ವಘೋಷಿತ ದೇವಮಾನವ ಡಾಟಿ ಮಹಾರಾಜ್ ವಿರುದ್ಧ ಬುಧವಾರ ಅತ್ಯಾಚಾರ ಪ್ರಕರಣವು ದಾಖಲಾಗಿದ್ದು,ದಿಲ್ಲಿ ಉಚ್ಚ ನ್ಯಾಯಾಲಯವು ಪ್ರಕರಣದ ತನಿಖೆಯನ್ನು ದಿಲ್ಲಿ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿ ಆದೇಶಿಸಿದೆ.

25ರ ಹರೆಯದ ಮಹಿಳೆಯೋರ್ವಳ ದೂರಿನ ಆಧಾರದಲ್ಲಿ ಈ ಪ್ರಕರಣವು ದಾಖಲಾಗಿದ್ದು,ಮುಂದಿನ ವಿಚಾರಣೆಯು ಅ.30ರಂದು ನಡೆಯಲಿದೆ.

ತಾನು ಕಳೆದೊಂದು ದಶಕದಿಂದಲೂ ಆರೋಪಿ ದೇವಮಾನವನ ಶಿಷ್ಯೆಯಾಗಿದ್ದೆ,ಆದರೆ ಆತನಿಂದ ಮತ್ತು ಆತನ ಇಬ್ಬರು ಶಿಷ್ಯರಿಂದ ಅತ್ಯಾಚಾರಕ್ಕೊಳಗಾದ ಬಳಿಕ ರಾಜಸ್ಥಾನದ ತನ್ನ ತವರೂರಿಗೆ ಮರಳಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಡಾಟಿ ಮಹಾರಾಜನ ಶಿಷ್ಯೆ ತನ್ನನ್ನು ಬಲವಂತದಿಂದ ಆತನ ಕೋಣೆಗೆ ಕಳುಹಿಸುತ್ತಿದ್ದಳು ಮತ್ತು ತಾನು ನಿರಾಕರಿಸಿದರೆ ಇತರ ಶಿಷ್ಯೆಯರೂ ಗುರುಗಳಿಗೆ ಈ ಸೇವೆಯನ್ನು ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದಳು ಎಂದೂ ಮಹಿಳೆ ತಿಳಿಸಿದ್ದಾಳೆ.

ಡಾಟಿ ಮತ್ತು ಆತನ ಇಬ್ಬರು ಸೋದರರನ್ನು ತಕ್ಷಣ ಬಂಧಿಸುವಂತೆ ಮತ್ತು ಆತನ ಎರಡು ಮುಖ್ಯ ಆಶ್ರಮಗಳಿಗೆ ಬೀಗ ಜಡಿಯುವಂತೆ ಮಹಿಳೆ ಆಗ್ರಹಿಸಿದ್ದಾಳೆ.

ಡಾಟಿಯನ್ನು ಬಂಧಿಸುವಲ್ಲಿ ವೈಫಲ್ಯಕ್ಕಾಗಿ ನ್ಯಾಯಾಲಯವು ಈ ಹಿಂದೆ ಕಾನೂನು ಜಾರಿ ಏಜೆನ್ಸಿಗಳನ್ನು ತರಾಟೆಗೆತ್ತಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News