×
Ad

ಅ.12ರಿಂದ ಮುಂಬೈ- ಗೋವಾ ಐಷಾರಾಮಿ ಹಡಗು ಪ್ರಯಾಣ

Update: 2018-10-04 21:49 IST

ಹೊಸದಿಲ್ಲಿ, ಅ.4: ಮುಂಬೈಯಿಂದ ಗೋವಾಕ್ಕೆ ಸಂಚರಿಸುವ ಐಷಾರಾಮಿ ಪ್ರಯಾಣಿಕರ ಹಡಗು ‘ಅಂಗ್ರಿಯಾ’ ಅ.12ರಂದು ಮುಂಬೈಯಿಂದ ಪ್ರಯಾಣ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.

ಸುಮಾರು 400 ಜನ ಪ್ರಯಾಣಿಸಬಲ್ಲ ಭಾರತದ ಪ್ರಪ್ರಥಮ ಐಷಾರಾಮಿ ಪ್ರಯಾಣಿಕರ ಹಡಗು ಮುಂಬೈಯ ಇಂದಿರಾ ಬಂದರಿನ ಪರ್ಪಲ್ ಗೇಟ್‌ನಿಂದ ಅ.12ರಂದು ಸಂಜೆ 5 ಗಂಟೆಗೆ ಪ್ರಯಾಣ ಆರಂಭಿಸಿ ಗೋವಾದ ಮರ್ಮಗೋವ ಬಂದರಿಗೆ ಮರುದಿನ ಬೆಳಿಗ್ಗೆ 9 ಗಂಟೆಗೆ ತಲುಪಲಿದೆ. ಪ್ರಯಾಣಿಕರಿಗೆ ಸಕಲ ಸೌಲಭ್ಯಗಳನ್ನು ಹೊಂದಿರುವ ಹಡಗಿನಲ್ಲಿ ಚೈನೀಸ್, ಕಾಂಟಿನೆಂಟಲ್, ಕೊಂಕಣಿ ಖಾದ್ಯಗಳನ್ನು ಉಣಬಡಿಸುವ 2 ರೆಸ್ಟಾರೆಂಟ್‌ಗಳು ಹಾಗೂ 6 ಬಾರ್‌ಗಳಿವೆ. ಟಿಕೆಟ್ ದರ ಒಬ್ಬ ವ್ಯಕ್ತಿಗೆ 7,000 ರೂ. (ಪ್ರತ್ಯೇಕ ಕೋಣೆಗೆ 11,000 ರೂ.) ಆಗಿದ್ದು ಇದರಲ್ಲಿ ಬೆಳಗ್ಗಿನ ಉಪಾಹಾರ, ಸಂಜೆಯ ಉಪಾಹಾರ ಮತ್ತು ರಾತ್ರಿಯ ಊಟ ಸೇರಿದೆ. ಮರಾಠಾ ನೌಕಾಪಡೆಯ ಪ್ರಥಮ ಅಡ್ಮಿರಲ್ ಆಗಿದ್ದ ಕಣ್ಹೋಜಿ ಅಂಗ್ರೆ (ಕೊಣಾಜೀ ಅಂಗ್ರಿಯಾ)ರ ಸ್ಮರಣಾರ್ಥ ಈ ಹಡಗಿಗೆ ಅಂಗ್ರಿಯಾ ಎಂದು ಹೆಸರಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News