×
Ad

ಅನುರಾಗ್ ನಿರ್ದೇಶನದ ಚಿತ್ರದಲ್ಲಿ ಸೈಫ್, ಅಭಿಷೇಕ್, ರಾವ್

Update: 2018-10-06 20:40 IST

ಬಾಲಿವುಡ್ ನಿರ್ದೇಶಕ ಅನುರಾಗ್ ಬಸು ಅವರು ವಿನೂತನ ಪ್ರಾಜೆಕ್ಟ್ ನೊಂದಿಗೆ ಬಾಲಿವುಡ್‌ಗೆ ಮತ್ತೆ ವಾಪಸಾಗಿದ್ದಾರೆ. ‘ಜಗ್ಗಾ ಜಾಸೂಸ್’ ಚಿತ್ರದ ಸೋಲಿನ ಬಳಿಕ ಅವರು ಚಿತ್ರರಂಗದಿಂದ ತುಸು ಬಿಡುವು ತೆಗೆದುಕೊಂಡಿದ್ದರು. ಬಾಲಿವುಡ್‌ನ ನಂಬಲಾರ್ಹ ಮೂಲಗಳ ಪ್ರಕಾರ, ಅನುರಾಗ್ ಬಸು ಅವರು ಮಲ್ಟಿಸ್ಟಾರ್ ಚಿತ್ರವೊಂದರ ನಿರ್ದೇಶನಕ್ಕೆ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಬಾಲಿವುಡ್‌ನ ಮೂವರು ಖ್ಯಾತ ನಟರಾದ ಸೈಫ್ ಅಲಿ ಖಾನ್, ರಾಜ್‌ಕುಮಾರ್ ರಾವ್ ಹಾಗೂ ಅಭಿಷೇಕ್ ಬಚ್ಚನ್ ನಟಿಸಲಿದ್ದಾರೆ.

ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾಗೆ ನಾಯಕಿ ಪಾತ್ರ ನೀಡಲು ಅನುರಾಗ್ ಬಸು ನಿರ್ಧರಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ಧಡ್ಕನ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ ಇಶಾನ್ ಖಟ್ಟರ್ ಕೂಡಾ ಈ ಚಿತ್ರದಲ್ಲಿ ಅತ್ಯಂತ ಸ್ವಾರಸ್ಯಕರವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ಬೆಳ್ಳಿಪರದೆ ಅಲಂಕರಿಸಲಿರುವ ಈ ಚಿತ್ರವನ್ನು ಟಿ-ಸಿರೀಸ್ ಕಂಪೆನಿ ನಿರ್ಮಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News