‘ನಾಗಾಲ್ಯಾಂಡ್‌ನ ಗಾಂಧಿ’ ನಟವರ್ ಠಕ್ಕರ್ ನಿಧನ
Update: 2018-10-07 19:58 IST
ಗುವಾಹಟಿ, ಅ.7: ಖ್ಯಾತ ಗಾಂಧೀವಾದಿ, ನಾಗಾಲ್ಯಾಂಡ್‌ನ ಗಾಂಧಿ ಎಂದೇ ಹೆಸರಾದ ನಟವರ್ ಠಕ್ಕರ್ ಅಲ್ಪಕಾಲದ ಅಸೌಖ್ಯದ ಬಳಿಕ ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಸೆ.19ರಂದು ತೀವ್ರ ಅಸ್ವಸ್ಥಗೊಂಡ ನಟವರ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟವರ್ ಪತ್ನಿ ಲೆಂಟಿನಾ ಅವೊ, ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪದ್ಮಶ್ರೀ ಪುರಸ್ಕೃತ ನಟವರ್ ನಾಗಾಲ್ಯಾಂಡ್‌ನ ಚುಚುಯಿಮ್ಲಂಗ್‌ನಲ್ಲಿ ಗಾಂಧಿ ಆಶ್ರಮ ಸ್ಥಾಪಿಸಿದ್ದರು. ಗಾಂಧೀಜಿ ಚಿಂತನೆ ಹಾಗೂ ಶಾಂತಿಮಾರ್ಗದ ಪ್ರಚಾರಕರಾಗಿದ್ದ ನಟವರ್ ನಾಗಾಲ್ಯಾಂಡ್‌ನ ಗಾಂಧಿ ಎಂದು ಹೆಸರಾಗಿದ್ದರು. ಮಹಾರಾಷ್ಟ್ರ ಮೂಲದವರಾದ ನಟವರ್ 1955ರಿಂದ ನಾಗಾಲ್ಯಾಂಡ್‌ನಲ್ಲೇ ವಾಸಿಸುತ್ತಿದ್ದರು.