×
Ad

ಜಮ್ಮು ಕಾಶ್ಮೀರದಲ್ಲಿ ಭೂಕಂಪನ

Update: 2018-10-07 20:19 IST

ಶ್ರೀನಗರ, ಅ.7: ಜಮ್ಮು ಕಾಶ್ಮೀರದಲ್ಲಿ ರವಿವಾರ ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆಯ ಭೂಕಂಪನ ಸಂಭವಿಸಿದೆ. ಆದರೆ ಯಾವುದೇ ಸಾವುನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 8:09ಕ್ಕೆ ಸಂಭವಿಸಿದ ಭೂಕಂಪನ ಉತ್ತರದಲ್ಲಿ 36.7 ಅಕ್ಷಾಂಶದಲ್ಲಿ ಕೇಂದ್ರೀಕೃತವಾಗಿತ್ತು. 206 ಕಿ.ಮೀ ಆಳದ ಭೂಕಂಪನವಾಗಿದೆ ಎಂದು ರಾಜ್ಯದ ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನದಿಂದ ಜನತೆ ಆತಂಕಕ್ಕೆ ಒಳಗಾದರು ಎಂದು ಮೂಲಗಳು ತಿಳಿಸಿವೆ. 2005ರ ಅಕ್ಟೋಬರ್ 8ರಂದು ರಾಜ್ಯದಲ್ಲಿ ಸಂಭವಿಸಿದ್ದ ಭೂಕಂಪನದಲ್ಲಿ 80,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News