×
Ad

ಮೋದಿ ಎಷ್ಟು ಭರವಸೆ ಈಡೇರಿಸಿದ್ದಾರೆ ಎಂದು ಪ್ರಶ್ನಿಸಿದ ವಿದ್ಯಾರ್ಥಿಗೆ ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆ: ಆರೋಪ

Update: 2018-10-07 22:03 IST

ಜಾರ್ಖಂಡ್, ಅ.7: ಕೇಂದ್ರ ಸರಕಾರದ ಆಡಳಿತದ ಬಗ್ಗೆ ಪ್ರಶ್ನಿಸಿದ ವಿದ್ಯಾರ್ಥಿಯೊಬ್ಬನಿಗೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ರವೀಂದ್ರ ಕುಮಾರ್ ರೇ, ಎಬಿವಿಪಿ ಕಾರ್ಯಕರ್ತರ ಕೃತ್ಯ, “ಸ್ವಾಭಾವಿಕ ಪ್ರತಿಕ್ರಿಯೆ” ಎಂದಿರುವುದು ವಿವಾದ ಸೃಷ್ಟಿಸಿದೆ.

ಜಾರ್ಖಂಡ್ ನಲ್ಲಿ ಈ ಘಟನೆ ನಡೆದಿದೆ. 2014ರಲ್ಲಿ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದ ಮೋದಿ ಸರಕಾರ ಯಾವ ಭರವಸೆಯನ್ನು ಈಡೇರಿಸಿದೆ ಎಂಬುದನ್ನು ವಿದ್ಯಾರ್ಥಿಗಳು ಆಲೋಚಿಸಬೇಕು ಎಂದು ವಿದ್ಯಾರ್ಥಿ ಸುಮನ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಈ ಸಂದರ್ಭ ವೇದಿಕೆಗೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು ಸುಮನ್ ರಿಂದ ಮೈಕ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

“ಮೋದಿ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆಲೋಚಿಸಬೇಕು ಎಂದಷ್ಟೇ ನಾನು ಹೇಳಿದ್ದೆ. ಆದರೆ ಎಬಿವಿಪಿ ಕಾರ್ಯಕರ್ತರು ಮೈಕ್ ಕಿತ್ತುಕೊಂಡು ನನಗೆ ಹಲ್ಲೆ ನಡೆಸಿದರು” ಎಂದು ಸುಮನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News