ಮತ್ತೆ ಏರಿಕೆಯಾದ ತೈಲ ಬೆಲೆ

Update: 2018-10-07 17:45 GMT

ಮುಂಬೈ, ಅ. 7: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ರವಿವಾರ ಮತ್ತೆ ಏರಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪೆನಿಗಳು ದಿನದ ಆಧಾರದಲ್ಲಿ ಬೆಲೆ ಪರಿಷ್ಕೃತ ಗೊಳಿಸುತ್ತಿದೆ. ತೈಲ ಬೆಲೆ ನಿಯಂತ್ರಿಸುವ ಅಧಿಕಾರವನ್ನು ಸರಕಾರ ಮತ್ತೆ ತನ್ನ ನಿಯಂತ್ರಣಕ್ಕೆ ತೆಗೆದು ಕೊಳ್ಳುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ತೈಲ ಮಾರುಕಟ್ಟೆ ಕಂಪೆನಿಗಳಿಗೆ ಭರವಸೆ ನೀಡಿದ್ದರು.

ಪೆಟ್ರೋಲ್‌ಗೆ ಈಗ ಚಿಲ್ಲರೆಯಾಗಿ ದಿಲ್ಲಿಯಲ್ಲಿ ಲೀಟರ್‌ಗೆ 81.82 ರೂ., ಮುಂಬೈಯಲ್ಲಿ 87.29 ರೂ., ಕೋಲ್ಕತ್ತಾದಲ್ಲಿ 83.66 ರೂ. ಹಾಗೂ ಚೆನ್ನೈಯಲ್ಲಿ 85.04 ರೂ. ಇದೆ. ನಾಲ್ಕು ಮೆಟ್ರೋಗಳಲ್ಲಿ ಪೆಟ್ರೋಲ್ ಬೆಲೆ 0.14 ರೂ. ಏರಿಕೆಯಾಗಿದೆ. ಡೀಸೆಲ್ ಚಿಲ್ಲರೆ ದಿಲ್ಲಿಯಲ್ಲಿ ಲೀಟರ್‌ಗೆ 73.53 ರೂ., ಕೋಲ್ಕತ್ತಾದಲ್ಲಿ ಲೀಟರ್‌ಗೆ 75.38 ರೂ., ಮುಂಬೈಯಲ್ಲಿ ಲೀಟರ್‌ಗೆ 77.06 ರೂ., ಚೆನ್ನೈಯಲ್ಲಿ ಲೀಟರ್‌ಗೆ 77.73 ರೂ. ಇದೆ. ಡೀಸೆಲ್ ಬೆಲೆ ದಿಲ್ಲಿ ಹಾಗೂ ಕೋಲ್ಕೊತ್ತಾದಲ್ಲಿ 0.29 ರೂ. ಏರಿಕೆಯಾಗಿದೆ. ಮುಂಬೈ ಹಾಗೂ ಚೆನ್ನೈಯಲ್ಲಿ 0.31 ಏರಿಕೆಯಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಅತ್ಯಧಿಕ ಹಾಗೂ ಚನ್ನೈಯಲ್ಲಿ ಡೀಸೆಲ್ ಬೆಲೆ ಅತ್ಯಧಿಕ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಶನಿವಾರ ಕ್ರಮವಾಗಿ 20 ಪೈಸೆ ಹಾಗೂ 30 ಪೈಸೆ ಏರಿಕೆಯಾಗಿದೆ. ಆದಾಗ್ಯೂ, ಮುಂಬೈಯಲ್ಲಿ ಡೀಸೆಲ್ ಬೆಲೆ ಶನಿವಾರ 7 ಪೈಸೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News