ಉ. ಕೊರಿಯ ಪರಮಾಣು ಸ್ಥಾವರ ಪರಿಶಿಲನೆಗೆ ಕಿಮ್ ಭರವಸೆ

Update: 2018-10-08 16:15 GMT

ಸಿಯೋಲ್, ಅ. 8: ಉತ್ತರ ಕೊರಿಯದ ನಾಶಗೊಳಿಸಲ್ಪಟ್ಟ ಪರಮಾಣು ಪರೀಕ್ಷಾ ಸ್ಥಾವರದ ಪರಿಶೀಲನೆಗೆ ಅಂತಾರಾಷ್ಟ್ರೀಯ ಇನ್‌ಸ್ಪೆಕ್ಟರ್‌ಗಳಿಗೆ ಅನುಮತಿ ದೊರೆಯುವುದು ಎಂದು ಅಮೆರಿಕ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಹೇಳಿದ್ದಾರೆ.

ಜಾಂಗ್ ಉನ್ ಜೊತೆ ಮಾತುಕತೆ ನಡೆಸಿದ ಬಳಿಕ ಅವರು ಈ ಹೇಳಿಕೆ ನೀಡಿದರು. ಕಿಮ್ ಜೊತೆಗಿನ ಮಾತುಕತೆಯ ವೇಳೆ, ಪರಮಾಣು ನಿಶ್ಶಸ್ತ್ರೀಕರಣಕ್ಕೆ ಸಂಬಂಧಿಸಿ ‘ಗಮನಾರ್ಹ ಪ್ರಗತಿ’ಯನ್ನು ಸಾಧಿಸಲಾಗಿದೆ ಎಂದೂ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಕಿಮ್ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಜೂನ್‌ನಲ್ಲಿ ಸಿಂಗಾಪುರದಲ್ಲಿ ನಡೆದ ಮಹತ್ವದ ಶೃಂಗ ಸಮ್ಮೇಳನದ ಬಳಿಕ ಸ್ಥಗಿತೊಂಡಿದ್ದ ಮಾತುಕತೆ ಪ್ರಕ್ರಿಯೆಗೆ ಚಾಲನೆ ನೀಡುವುದಕ್ಕಾಗಿ ಪಾಂಪಿಯೊ ರವಿವಾರ ಉತ್ತರ ಕೊರಿಯದ ರಾಜಧಾನಿ ಪಾಂಗ್‌ಯಾಂಗ್‌ನಲ್ಲಿ ಕಿಮ್ ಜೊತೆ ಮಾತುಕತೆ ನಡೆಸಿದರು.

‘‘ನಾಶಗೊಳಿಸಲಾದ ಪಂಗ್ಯೆ-ರಿ ಪರಮಾಣು ಪರೀಕ್ಷಾ ಸ್ಥಾವರದ ತಪಾಸಣೆಗೆ ಪರಮಾಣು ಇನ್ಸ್‌ಪೆಕ್ಟರ್‌ಗಳಿಗೆ ಅವಕಾಶ ನೀಡಲು ನಾನು ಸಿದ್ಧ ಎಂಬುದಾಗಿ ಚೇರ್‌ಮನ್ ಕಿಮ್ ಹೇಳಿದರು’’ ಎಂದು ಪಾಂಪಿಯೊ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News