ಲಂಕಾ: ಎಲ್ಟಿಟಿಇ ಆಡಳಿತ ಬೇಕೆಂದ ತಮಿಳು ಸಂಸದೆಯ ಬಂಧನ

Update: 2018-10-08 16:32 GMT

ಕೊಲಂಬೊ, ಅ. 8: ನಿಷೇಧಿತ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಮರಳಿ ಬರಬೇಕು ಎಂಬುದಾಗಿ ಕರೆ ನೀಡಿರುವ ಶ್ರೀಲಂಕಾ ಸಂಸದೆಯೋರ್ವರನ್ನು ಸೋಮವಾರ ಬಂಧಿಸಲಾಗಿದೆ.

ಕಾನೂನು ಮತ್ತು ವ್ಯವಸ್ಥೆ ನಿರ್ವಹಣೆಯಲ್ಲಿ ಈಗಿನ ಪೊಲೀಸರಿಗಿಂತ ಎಲ್ಟಿಟಿಇ ಉತ್ತಮವಾಗಿತ್ತು ಎಂಬುದಾಗಿ ತಮಿಳು ಸಂಸದೆ ವಿಜಯಕಲಾ ಮಹೇಶ್ವರನ್ ಹೇಳಿದ್ದರು.

ಎಲ್ಟಿಟಿಇ ಆಳ್ವಿಕೆಯಲ್ಲಿ ಉತ್ತರ ಶ್ರೀಲಂಕಾದ ಜನರು ಸುರಕ್ಷಿತರಾಗಿದ್ದರು ಎಂಬುದಾಗಿ ಈ ವರ್ಷದ ಆದಿ ಭಾಗದಲ್ಲಿ ಮಾಡಿದ ಭಾಷಣದಲ್ಲಿ ಅವರು ಹೇಳಿದ್ದರು.

ಎಲ್ಟಿಟಿಇ ನಿಯಂತ್ರಣಕ್ಕೆ ಒಳಪಟ್ಟ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆದ ಹಿಂಸಾಚಾರದ ಪ್ರಮಾಣ ಕಡಿಮೆಯಾಗಿತ್ತು ಎಂದು ಅವರು ಹೇಳಿದ್ದರು. 37 ವರ್ಷಗಳ ಕಾಲ ಪ್ರತ್ಯೇಕ ತಮಿಳು ದೇಶಕ್ಕಾಗಿ ಬಂಡಾಯ ಹೂಡಿದ್ದ ಎಲ್ಟಿಟಿಇಯನ್ನು ಶ್ರೀಲಂಕಾ ಸೇನೆಯು 2009ರಲ್ಲಿ ಮಟ್ಟ ಹಾಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News