ಬಹರೈನ್‌ನಲ್ಲಿ ವ್ಯಾಟ್ ಜಾರಿ: ಕರಡು ಮಸೂದೆ ಅಂಗೀಕರಿಸಿದ ಸಂಸದರು

Update: 2018-10-08 16:52 GMT

ದುಬೈ, ಅ. 8: ಬಹರೈನ್‌ನಲ್ಲಿ ಮೊದಲ ಬಾರಿಗೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯನ್ನು ಜಾರಿಗೊಳಿಸಲಾಗಿದ್ದು, ಈ ಸಂಬಂಧದ ಕರಡು ಮಸೂದೆಯನ್ನು ಸಂಸದರು ರವಿವಾರ ಅಂಗೀಕರಿಸಿದ್ದಾರೆ ಎಂದು ಸರಕಾರಿ ಸುದ್ದಿ ಸಂಸ್ಥೆ ಬಿಎನ್‌ಎ ವರದಿ ಮಾಡಿದೆ.

ವ್ಯಾಟ್ ಜಾರಿಗೆ ಸಂಬಂಧಿಸಿದ ‘ಕೊಲ್ಲಿ ಅರಬ್ ಒಪ್ಪಂದ’ವನ್ನು ಪ್ರತಿನಿಧಿಗಳ ಸದನ ಅಂಗೀಕರಿಸಿದೆ ಎಂದು ಅದು ತಿಳಿಸಿದೆ.  ಇದಕ್ಕೂ ಮೊದಲು, ಈ ವಿಷಯದಲ್ಲಿ ರವಿವಾರ ವಿಶೇಷ ಅಧಿವೇಶನ ನಡೆಸುವಂತೆ ಸಂಸತ್ತಿಗೆ ರಾಜಾಜ್ಞೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News