ಮಲಯಾಳಂ ನಟ ಮುಕೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Update: 2018-10-09 11:05 GMT

ತಿರುವನಂತಪುರಂ, ಅ.9: 19 ವರ್ಷಗಳ ಹಿಂದೆ ತನ್ನ ಮೇಲೆ ಪ್ರಸಿದ್ಧ ಮಲಯಾಳಂ ನಟ ಮುಕೇಶ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮುಂಬೈ ಮೂಲದ ಕಾಸ್ಟಿಂಗ್ ನಿರ್ದೇಶಕಿಯೊಬ್ಬರು ಆರೋಪಿಸಿದ್ದಾರೆ.

ಮಲಯಾಳಂ ಟಿವಿ ಕಾರ್ಯಕ್ರಮ ‘ಕೋಡೀಶ್ವರನ್’ನ ನಡೆಯುತ್ತಿದ್ದ ಸಂದರ್ಭ ಮುಕೇಶ್ ತನಗೆ ಹಲವು ಬಾರಿ ಕರೆ ಮಾಡಿದ್ದರು ಹಾಗು ಅವರ ಕೋಣೆಯ ಸಮೀಪಕ್ಕೆ ತನ್ನ ಕೋಣೆಯನ್ನು ಬದಲಿಸಿದ್ದರು ಎಂದು ಟೆಸ್ಸ್ ಜೋಸೆಫ್ ಎಂಬವರು ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ.

ಕೂಡಲೇ ತಾನು ಡೆರೆಕ್ ಒಬ್ರಿಯಾನ್ ರನ್ನು ಸಂಪರ್ಕಿಸಿದ್ದೆ. ಅವರು ವಿಮಾನದ ಟಿಕೆಟ್ ನ ವ್ಯವಸ್ಥೆ ಮಾಡಿದ್ದೆ. ಆದ್ದರಿಂದ ಆ ದಿನ  ರಾತ್ರಿ ತಾನು ಮುಂಬೈಗೆ ಹಿಂದಿರುಗಲು ಸಾಧ್ಯವಾಯಿತು ಎಂದವರು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಮುಕೇಶ್ ನಿರಾಕರಿಸಿದ್ದು, “20 ವರ್ಷಗಳ ಹಿಂದೆ ಏನು ನಡೆದಿತ್ತು ಎನ್ನುವ ನೆನಪು ಕೂಡ ನನಗಿಲ್ಲ. ನಿಮಗೆ ಏನು ಬೇಕೋ ಅದನ್ನು ಬರೆಯಬಹುದು” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News