ತಮಿಳು ಸಾಹಿತಿ ವೈರಮುತ್ತು, ನಟ ರಾಧಾ ರವಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Update: 2018-10-09 16:22 GMT

ಚೆನ್ನೈ, ಅ. 9: ತಮಿಳಿನ ಖ್ಯಾತ ಸಾಹಿತಿ ವೈರಮುತ್ತು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮೂವರು ಅನಾಮಿಕ ಮಹಿಳೆಯರು ಆರೋಪಿಸಿದ್ದಾರೆ. ಹಿರಿಯ ನಟ ರಾಧಾ ರವಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಇನ್ನೋರ್ವ ಮಹಿಳೆ ಆರೋಪಿಸಿದ್ದಾರೆ.

ವೈರಮುತ್ತು ಅವರ ನಿವಾಸ ಕಮ್ ಕಚೇರಿಗೆ ಆಹ್ವಾನಿಸಿದ ಸಂದರ್ಭ 18 ವರ್ಷದ ಇಬ್ಬರು ಮಹಿಳಾ ಹಾಡುಗಾರ್ತಿಯರಿಗೆ ಅವರು ಕಿರುಕುಳ ನೀಡಿದ್ದರು. ವೈರಮುತ್ತು ಅವರು ನನ್ನನ್ನು ಅಪ್ಪಿಕೊಂಡರು ಹಾಗೂ ಚುಂಬಿಸಿದರು ಎಂದು ಓರ್ವ ಮಹಿಳೆ ಆರೋಪಿಸಿದ್ದಾರೆ. ಅವರು ಕೊಠಡಿ ಮುಚ್ಚಿದರು ಹಾಗೂ ನನ್ನನ್ನು ಸ್ಪರ್ಶಿಸಿದರು ಎಂದು ಇನ್ನೋರ್ವ ಮಹಿಳೆ ಆರೋಪಿಸಿದ್ದಾರೆ. ಪತ್ರಕರ್ತೆ ಸಂಧ್ಯಾ ಮೆನನ್ ಸಂತ್ರಸ್ತರ ಪರವಾಗಿ ಟ್ವೀಟ್ ಮಾಡಿದ್ದಾರೆ. ಇದರಿಂದ ಈ ಘಟನೆ ಬಹಿರಂಗಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News