5 ಲಕ್ಷ ಗೂಗಲ್ ಪ್ಲಸ್ ಬಳಕೆದಾರರ ಮಾಹಿತಿ ಸೋರಿಕೆ

Update: 2018-10-09 16:53 GMT

ವಾಶಿಂಗ್ಟನ್, ಅ. 9: ಸಾಮಾಜಿಕ ಜಾಲತಾಣ ‘ಗೂಗಲ್ ಪ್ಲಸ್’ನ ಬಳಕೆದಾರ ವಿಭಾಗವನ್ನು ಮುಚ್ಚುವುದಾಗಿ ತಂತ್ರಜ್ಞಾನ ದೈತ್ಯ ಗೂಗಲ್ ಹೇಳಿದೆ.

ಸುಮಾರು 5 ಲಕ್ಷ ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿಯು ಹೊರಗಿನವರಿಗೆ ಲಭಿಸಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಅದು ತಿಳಿಸಿದೆ.

ಈ ವೈಫಲ್ಯಕ್ಕೆ ತಾಂತ್ರಿಕ ದೋಷವೊಂದು ಕಾರಣವಾಗಿದ್ದು, ಗೂಗಲ್ ಪ್ಲಸ್‌ನ ವ್ಯವಸ್ಥೆಯಲ್ಲಿ ಎರಡು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಇದೆ ಎಂದಿದೆ.

ಈ ವರ್ಷದ ಮಾರ್ಚ್‌ನಲ್ಲಿ ಸೋರಿಕೆಯನ್ನು ಪತ್ತೆಹಚ್ಚಿ ಮುಚ್ಚಲಾಗಿದೆ ಹಾಗೂ ಬಳಕೆದಾರರ ದತ್ತಾಂಶ ದುರ್ಬಳಕೆ ಬಗ್ಗೆ ಯಾವುದೇ ಪುರಾವೆಯಿಲ್ಲ ಎಂದು ಸೋಮವಾರ ಬ್ಲಾಗ್ ಒಂದರಲ್ಲಿ ಕಂಪೆನಿ ಹೇಳಿದೆ.

ಇದರ ಬೆನ್ನಿಗೇ ಅದರ ಮಾತೃ ಕಂಪೆನಿ ‘ಆಲ್ಫಾಬೆಟ್ ಇಂಕ್’ನ ಶೇರುಗಳ ವೌಲ್ಯವು 1.5 ಶೇಕಡದಷ್ಟು ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News