ಅನಿಲ ನಿಕ್ಷೇಪ ಖರೀದಿಯಲ್ಲಿ ಭ್ರಷ್ಟಾಚಾರ

Update: 2018-10-09 18:25 GMT

ಹೊಸದಿಲ್ಲಿ, ಅ.9: ಒಎನ್‌ಜಿಸಿಯ ನಿರ್ಧಾರ ಹಾಗೂ ವೆಚ್ಚ ಮಾಡುವಲ್ಲಿ ನರೇಂದ್ರ ಮೋದಿ ಸರಕಾರ ಮಧ್ಯ ಪ್ರವೇಶಿಸುತ್ತಿದೆ ಎಂದು ಒಎನ್‌ಜಿಸಿ ಆರೋಪಿಸಿದೆ. ಹುದ್ದೆಗೆ ಅರ್ಹತೆ ಹೊಂದಿರದೇ ಇದ್ದರೂ ಕಂಪೆನಿಯ ಸ್ವತಂತ್ರ ನಿರ್ದೇಶಕ ರಾಗಿ ಸಂಬಿತ್ ಪಾತ್ರಾ ಅವರನ್ನು ಆಯ್ಕೆ ಮಾಡಿರುವುದರಲ್ಲಿ ಇದು ಸ್ಪಷ್ಟವಾಗಿದೆ. ಈ ಆಯ್ಕೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಎಂದು ಅದು ಹೇಳಿದೆ. ಹಲವು ಆಶಾದಾಯಕ ಕ್ಷೇತ್ರಗಳಲ್ಲಿ ಖಾಸಗಿ ಸಂಸ್ಥೆಗಳನ್ನು ನಿಯಂತ್ರಣಕ್ಕೆ ಆಹ್ವಾನಿಸುವುದು ಬಿಜೆಪಿ ಸರಕಾರದ ಕ್ರೋನಿ ಬಂಡವಾಳಶಾಹಿಗೆ ಉದಾಹರಣೆ. ಇದರಿಂದ ದೇಶದ ಹಿತಾಸಕ್ತಿಗೆ ಧಕ್ಕೆ ಉಂಟಾಗಬಹುದು ಎಂದು ಕಾರ್ಮಿಕರ ಮಜ್ದೂರ್ ಸಭಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2019 ಸೆಪ್ಟಂಬರ್ 4ರಂದು ಬರೆದ ಪತ್ರದಲ್ಲಿ ಆರೋಪಿಸಿದೆ. ನಾಲ್ಕು ಪುಟಗಳ ಈ ಪತ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ತೆಗೆದುಕೊಂಡ ಹಲವು ಸಂಶಯಾಸ್ಪದ ನಿರ್ಧಾರಗಳ ಬಗ್ಗೆ ಉಲ್ಲೇಖಿಸಿದೆ.

‘‘8000 ಕೋ. ರೂ. ವೆಚ್ಚದಲ್ಲಿ ಜಿಎಸ್‌ಪಿಸಿಗೆ ಸೇರಿದ ಕೃಷ್ಣಾ ಗೋದಾವರಿ ಜಲಾನಯನ ಪ್ರದೇಶದಲ್ಲಿರುವ ಅನಿಲ ನಿಕ್ಷೇಪಗಳನ್ನು ಶೋಧಿಸುವಂತೆ ಒಎನ್‌ಜಿಸಿಗೆ ಭಾರತ ಸರಕಾರ 2016ರಲ್ಲಿ ಒತ್ತಡ ಹೇರಿತ್ತು. ವಿದೇಶಿ ತಜ್ಞರ ನೆರವು ಹಾಗೂ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ವೆಚ್ಚ ಮಾಡಿದರೂ ಅವರಿಗೆ ಅನಿಲ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಹಾಗಾದರೆ, ಅನಿಲ ನಿಕ್ಷೇಪಗಳನ್ನು ಪಡೆಯಲು ಒಎನ್‌ಜಿಸಿಗೆ 8000 ಕೋ. ರೂ. ಯಾಕೆ ನೀಡಿತು’’ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News