ಯೂತ್ ಒಲಿಂಪಿಕ್ಸ್: ಅರ್ಚನಾ ಕಾಮತ್ ಸೆಮಿಫೈನಲ್‌ಗೆ

Update: 2018-10-10 15:57 GMT

ಬ್ಯುನಸ್ ಐರಿಸ್, ಅ.10: ಭಾರತದ ಟೇಬಲ್ ಟೆನಿಸ್ ಯುವ ಆಟಗಾರ್ತಿ ಅರ್ಚನಾ ಕಾಮತ್ ಯೂತ್ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕದ 18ರ ಹೆರೆಯದ ಆಟಗಾರ್ತಿ ಅಝರ್‌ಬೈಜಾನ್‌ನ ನಿಗ್ನಿ ಜಿಂಗ್‌ರನ್ನು 4-3 ಅಂತರದಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು.

ಸೆಮಿಫೈನಲ್‌ನಲ್ಲಿ ಯಿಂಗ್‌ಶಾ ಸನ್‌ರನ್ನು ಎದುರಿಸಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News