ಮಲೇಶ್ಯದಲ್ಲಿ ಮರಣ ದಂಡನೆ ರದ್ದು

Update: 2018-10-11 16:06 GMT

ಕೌಲಾಲಂಪುರ (ಮಲೇಶ್ಯ), ಅ. 11: ಮಲೇಶ್ಯದ ನೂತನ ಸರಕಾರ ಮರಣ ದಂಡನೆಯನ್ನು ರದ್ದುಪಡಿಸಿದೆ ಹಾಗೂ ಬಾಕಿಯಿರುವ ಎಲ್ಲ ಮರಣ ದಂಡನೆಗಳ ಜಾರಿಯನ್ನು ನಿಲ್ಲಿಸಿದೆ.

ಮಲೇಶ್ಯದಲ್ಲಿ ಪ್ರಸಕ್ತ 1,200ಕ್ಕೂ ಅಧಿಕ ಮಂದಿ ಮರಣ ದಂಡನೆಯನ್ನು ಎದುರು ನೋಡುತ್ತಿದ್ದಾರೆ.

ಕೊಲೆ, ಮಾದಕ ದ್ರವ್ಯ ಸಾಗಾಟ, ದೇಶದ್ರೋಹ, ಅಪಹರಣ ಮತ್ತು ಭಯೋತ್ಪಾನೆ ಕೃತ್ಯಗಳು ಸೇರಿದಂತೆ ವಿವಿಧ ಅಪರಾಧಗಳಿಗೆ ಮಲೇಶ್ಯದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗುತ್ತಿತ್ತು.

ಮರಣ ದಂಡನೆಯನ್ನು ರದ್ದುಪಡಿಸುವ ಪ್ರಸ್ತಾಪಕ್ಕೆ ಮಲೇಶ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಹಾಗೂ ಈ ಸಂಬಂಧ ಕಾನೂನಿಗೆ ಮಾಡಲಾಗಿರುವ ತಿದ್ದುಪಡಿಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಕಾನೂನು ಸಚಿವ ಲ್ಯೂ ವುಯಿ ಕಿಯಾಂಗ್ ಬುಧವಾರ ಘೋಷಿಸಿದ್ದಾರೆ ಎಂಬುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News