ನಿರ್ದೇಶಕ ಸಾಜಿದ್ ಖಾನ್ ಮೇಲೆ #ಮೀಟೂ ಕಳಂಕ : 'ಹೌಸ್‍ಫುಲ್ 4' ಶೂಟಿಂಗ್ ರದ್ದುಗೊಳಿಸಿದ ಅಕ್ಷಯ್

Update: 2018-10-12 12:03 GMT

ಹೊಸದಿಲ್ಲಿ,ಅ.12: ‘ಹೌಸ್‍ಫುಲ್ 4' ಚಿತ್ರದ ನಿರ್ದೇಶಕ ಸಾಜಿದ್ ಖಾನ್ ವಿರುದ್ಧ #ಮೀಟೂ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಆ ಚಿತ್ರದ ಚಿತ್ರೀಕರಣ ರದ್ದುಪಡಿಸುವಂತೆ ಹೇಳಿದ್ದಾಗಿ ನಟ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.

“ತಪ್ಪು ಮಾಡಿದವರ ಜತೆ ನಾನು ಕೆಲಸ ಮಾಡುವುದಿಲ್ಲ ಹಾಗೂ ಕಿರುಕುಳಕ್ಕೊಳಗಾದವರ ಮಾತುಗಳನ್ನು ಕೇಳಿ ಅವರಿಗೆ ನ್ಯಾಯ ಒದಗಿಸಬೇಕು.'' ಎಂದು ಕುಟುಂಬದ ಜತೆ ರಜೆಯಲ್ಲಿ ತೆರಳಿ ಇತ್ತೀಚೆಗಷ್ಟೇ ಸ್ವದೇಶಕ್ಕೆ ಮರಳಿದ ಅಕ್ಷಯ್ ಹೇಳಿದ್ದಾರೆ.

ಅಕ್ಷಯ್ ಅವರ ಟ್ವೀಟ್ ಮೂಡಿ ಬಂದ ಸ್ವಲ್ಪ ಹೊತ್ತಿನಲ್ಲಿಯೇ ತಮ್ಮ ವಿರುದ್ಧದ ಆರೋಪಗಳು ತಪ್ಪೆಂದು ತಾನು ಸಾಬೀತುಪಡಿಸುವ ತನಕ  ಚಿತ್ರದ ನಿರ್ದೇಶಕ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಸಾಜಿದ್ ಘೋಷಿಸಿದ್ದಾರೆ.

ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ತನ್ನ ಪತಿಯೂ ಸೇರಿದಂತೆ ಚಿತ್ರದಲ್ಲಿರುವ ಎಲ್ಲರೂ ಕಠಿಣ ನಿಲುವು ತಾಳಬೇಕು, ಇದನ್ನು ಹೀಗೆಯೇ ಮುಂದುವರಿಯಲು ಬಿಡುವುದು ಸರಿಯಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News