ಸದ್ಯದಲ್ಲೇ ಅಮಿತಾಬ್ ಬಚ್ಚನ್ ಬಣ್ಣ ಬಯಲು ಮಾಡುತ್ತೇನೆ ಎಂದ ಪ್ರಸಿದ್ಧ ಕೇಶವಿನ್ಯಾಸಗಾರ್ತಿ

Update: 2018-10-13 09:25 GMT

ಹೊಸದಿಲ್ಲಿ, ಅ.13: ಭಾರತದಲ್ಲಿ ‘ಮೀಟೂ’ ಆಂದೋಲನ ಆರಂಭವಾದ ನಂತರ ಬಾಲಿವುಡ್ ನ ಪ್ರಸಿದ್ಧ ಸೆಲೆಬ್ರಿಟಿಗಳಾದ ಸಾಜಿದ್ ಖಾನ್, ಅನು ಮಲಿಕ್, ಕೈಲಾಶ್ ಖೇರ್, ಅಲೋಕ್ ನಾಥ್ ಮೊದಲಾದವರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬರುತ್ತಿವೆ. ಇದೀಗ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ವಿರುದ್ಧ ಕಿಡಿಕಾರಿರುವ ಪ್ರಸಿದ್ಧ ಕೇಶವಿನ್ಯಾಸಗಾರ್ತಿ ‘ಸದ್ಯದಲ್ಲೇ ನಿಮ್ಮ ಬಣ್ಣ ಬಯಲು ಮಾಡುತ್ತೇನೆ’ ಎಂದಿದ್ದಾರೆ.

‘ಮೀಟೂ’ ಆಂದೋಲನವನ್ನು ಬೆಂಬಲಿಸಿ ಅಮಿತಾಬ್ ಮಾಡಿದ್ದ ಟ್ವೀಟ್ ಒಂದನ್ನು ಟ್ವಿಟರ್ ಬಳಕೆದಾರರೊಬ್ಬರು ರಿಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಶವಿನ್ಯಾಸಗಾರ್ತಿ ಸಪ್ನಾ ಭವ್ನಾನಿ , “ಇದು ಅತೀ ದೊಡ್ಡ ಸುಳ್ಳು. ನಿಮ್ಮ ಸತ್ಯ ಸದ್ಯದಲ್ಲೇ ಹೊರ ಬರಲಿದೆ. ಉಗುರು ಸಾಲದೇ ಇರುವುದರಿಂದ ನೀವು ಕೈಯನ್ನೇ ಕಚ್ಚುತ್ತಿದ್ದೀರಿ ಎಂದು ನಂಬಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News